
ಮಂಗಳೂರು: ಕುಲಾಲ ಸಂಘ(ರಿ ) ಕುಳಾಯಿ, ಕುಲಾಲ ಮಹಿಳಾ ಮಂಡಲ ಕುಳಾಯಿ ಹಾಗೂ ಕುಲಾಲ ರಜತ ಸೇವಾ ಟ್ರಸ್ಟ್ ಇದರ ಸಹಯೋಗದಲ್ಲಿ ಆಟಿದ ಪೊಲಬು ಕಾರ್ಯಕ್ರಮವು ಇಂದು ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಕುಲಾಯಿ ಯಲ್ಲಿ ನಡೆಯಿತು..



ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶ್ರೀ ಗಂಗಾಧರ್ ಬಂಜನ್ ಕುಲಾಯಿ ( ಅಧ್ಯಕ್ಷರು ಕುಲಾಯಿ ಕುಲಾಲ ಸಂಘ ) ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ ಅನಿಲ್ ದಾಸ್, ( ನಿರ್ದೇಶಕರು ದಾಸ್ ಪ್ರಮೋಷನ್ಸ್ ಮಂಗಳೂರು ) ಶ್ರೀ ಕಿರಣ್ ಕುಮಾರ್ ( ಆಫೀಸರ್ ಎಂಆರ್ಪಿಯಲ್ ) ಶ್ರೀ ಜಗನ್ನಾಥ್ ( ಎಸ್.ಐ.ಸಿ ಎಸ್ ಎಫ್ ) ಶ್ರೀ ಪ್ರಭಾಕರ್. ಪಿ. ( ಮಾಲಕರು ಅರ್ಪಿತ ಸ್ಟುಡಿಯೋ ), ಶ್ರೀ ಸೀತಾರಾಮ್ ಸಾಲೆತ್ತೂರ್ ( ಮಾಲಕರು ಜನಕ ಡ್ರೈನ್ ಸ್ಕೂಲ್ ) ಉಪಸ್ಥಿತರಿದ್ದರು..

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ. ಶ್ರೀ ಯಜ್ಞೆಶ್ ಬರ್ಕೆ ಮತ್ತು ಶ್ರೀ ಶ್ರೀನಿವಾಸ ಸಾಲ್ಯಾನ್, ಶ್ರೀ ಪ್ರಮೋದ್ ಕುಮಾರ್, ಡಾಕ್ಟರ್ ಸುಪ್ರಿಯಾ ಪ್ರಕಾಶ್, ಡಾಕ್ಟರ್ ಪೂಜಾ ಕುಂಬಳೆ ಮುಂತಾದವರನ್ನು ಸನ್ಮಾನಿಸಲಾಯಿತು.


ಮಹಿಳಾ ಸಂಘದ ಅಧ್ಯಕ್ಷೆ, ಶ್ರೀಮತಿ ಲೋಲಾಕ್ಷಿ ಹರೀಶ್ ಉಪಸ್ಥಿತರಿದ್ದರು .. ಆಟಿದ ಕಾರ್ಯಕ್ರಮದ ಬಗ್ಗೆ ಶ್ರೀಮತಿ ಆಶಲತಾ ( ಉಪನ್ಯಾಸಕಿ ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜ್ ಮಂಗಳೂರು ) ಆಟಿದ ಮದಿಪು ಬಗ್ಗೆ ಮಾತಾಡಿದರು ಹಾಗೂ ಶ್ರೀ ನಾಗೇಶ್ ಕುಳಾಯಿ, ರಜತ ಸೇವಾ ಟ್ರಸ್ಟ್ ಕುಲಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.. ಶ್ರೀ ಗಣೇಶ್ ಹೊಸಬೆಟ್ಟು ವಂದನಾರ್ಪಣೆಗೈದರು.. ಬಳಿಕ ಆಟಿದ ತಿನಸುಗಳೊಂದಿಗೆ ಭೋಜನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.


