
ಕುಲಾಲ ಸಂಘ (ರಿ) ಮೂಡಬಿದ್ರೆ ವತಿಯಿಂದ ಸ್ವಜಾತಿ ಬಾಂಧವರಿಗಾಗಿ “ಆಟಿಡ್ ಒಂಜಿ ದಿನ ಕಾರ್ಯಕ್ರಮ” ದಿನಾಂಕ 28-೦7-2024,ಆದಿತ್ಯವಾರ ರಂದು ಕುಲಾಲ ಸಂಘದ ನಿವೇಶನದಲ್ಲಿ ನಡೆಯಲಿದೆ.


ಸಮಯ ಬೆಳಿಗ್ಗೆ 10.00 ರಿಂದ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ
ಸ್ಪರ್ಧೆಗಳ ವಿವರ- ಮಕ್ಕಳ ವಿಭಾಗ :


ಲಿಂಬೆ ಚಮಚ ಓಟ

ಸಂಗೀತ ಕುರ್ಚಿ ಸ್ಪರ್ಧೆ
ಎಲೆಗಳ ಹೆಸರನ್ನು ಗುರುತಿಸಿ ಬರೆಯುವುದು
ಚಿತ್ರಕಲೆ ವಿಷಯ : ಆಟಿ ತಿಂಗಳ ಆಚರಣೆಗಳು
ಜ್ಞಾಪಕ ಶಕ್ತಿ ಪರೀಕ್ಷೆ
ಪುರುಷರ ವಿಭಾಗ
ಹಗ್ಗ- ಜಗ್ಗಾಟ
ಮಹಿಳೆಯರ ವಿಭಾಗ
ಹಗ್ಗ ಜಗ್ಗಾಟ
ಕೊಟ್ಟಿಗೆ ಕಟ್ಟುವುದು
ಸ್ಥಳದಲ್ಲಿಯೇ ಹೂಗುಚ್ಚ ತಯಾರಿ
ಜ್ಞಾಪಕ ಶಕ್ತಿ ಪರೀಕ್ಷೆ
ಈ ಮೇಲಿನ ಸ್ಪರ್ಧೆಯಲ್ಲಿ ಭಾಗವಹಿಸುವವರು 26/07/2024ನೇ ಶುಕ್ರವಾರ ಸಂಜೆಯ ಒಳಗಾಗಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕಾರ್ಯಕ್ರಮದ ದಿನದಂದು ಹೆಸರು ನೀಡಿದವರನ್ನು ಸ್ಪರ್ಧೆಗೆ ಸೇರಿಸಿಕೊಳ್ಳಲಾಗುವುದಿಲ್ಲ.
ಸ್ಪರ್ಧಾ ನಿಯಮಗಳು ಹೀಗಿವೆ.
1. ಚಿತ್ರಕಲೆಯಲ್ಲಿ ಭಾಗವಹಿಸುವವರಿಗೆ ಡ್ರಾಯಿಂಗ್ ಶೀಟನ್ನು ಸಂಘದಿಂದ ನೀಡಲಾಗುವುದು. ಚಿತ್ರ ಮಾಡಲು ಬೇಕಾದ ಕಲರ್ , ಇನ್ನಿತರ ಅಗತ್ಯ ಸಾಮಾಗ್ರಿಗಳನ್ನು ನೀವೇ ತರಬೇಕು. ವಾಟರ್ ಕಲರ್ ಅಥವಾ ಕ್ರೆಯಾನ್ಸ್ ಬಳಸಬಹುದು. ಚಿತ್ರಕಲೆಗೆ ನೀಡಿದ ವಿಷಯವನ್ನು ಆಧರಿಸಿ ಚಿತ್ರ ಬಿಡಿಸಬೇಕು. ಚಿತ್ರಕಲೆಯ ಅವಧಿ 2.00 ಗಂಟೆ.
2. ಕೊಟ್ಟಿಗೆ ಕಟ್ಟುವ ಸ್ಪರ್ಧೆಯಲ್ಲಿ ಭಾಗವಹಿಸುವವರು ಹಲಸಿನ ಎಲೆ, ಕಡ್ಡಿಗಳನ್ನು ನೀವೇ ತರಬೇಕು. ನಾಲ್ಕು ಎಲೆಗಳನ್ನು ಬಳಸಿಕೊಂಡು ಕೊಟ್ಟಿಗೆ ಕಟ್ಟಬೇಕು. ಅವಧಿ 20 ನಿಮಿಷಗಳು. ನಿಗದಿತ ಸಮಯದಲ್ಲಿ ಯಾರು ಅಚ್ಚುಕಟ್ಟಾಗಿ ಅತಿ ಹೆಚ್ಚು ಕೊಟ್ಟಿಗೆ ಕಟ್ಟುವವರು ಸ್ಪರ್ಧೆಯಲ್ಲಿ ವಿಜೇತರಾಗುತ್ತಾರೆ.
3. ಹೂಗುಚ್ಚ ತಯಾರಿಯಲ್ಲಿ ಭಾಗವಹಿಸುವವರು ಹೂಗುಚ್ಚ ತಯಾರಿಸಲು ಬೇಕಾದ ಅಗತ್ಯ ವಸ್ತುಗಳನ್ನು ನೀವೇ ತರಬೇಕು. ಕ್ರಾಟಾನ್ ಗಿಡದ ಎಲೆಗಳು, ಹೂವುಗಳನ್ನು ಬಳಸಿಕೊಂಡು ಒಂದಕ್ಕಿಂತ ಹೆಚ್ಚು ಹೂಗುಚ್ಚ ವನ್ನು ತಯಾರಿಸಬೇಕು. ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ. ಹೂಗುಚ್ಚ ತಯಾರಿಸಲು ನೀಡುವ ಅವಧಿ 20 ನಿಮಿಷಗಳು.
4. ಪ್ರತಿ ಸ್ಪರ್ಧೆಯಲ್ಲಿ ಕನಿಷ್ಠ 5 ಮಂದಿಯಾದರೂ ಇರಲೇಬೇಕು. ಇಲ್ಲವಾದಲ್ಲಿ ಆ ಸ್ಪರ್ಧೆಯನ್ನು ರದ್ದು ಮಾಡಲಾಗುವುದು.
5. ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಆಕರ್ಷಕ ಬಹುಮಾನವನ್ನು ನೀಡಿ ಗೌರವಿಸಲಾಗುವುದು.
6. ತೀರ್ಪುಗಾರರ ತೀರ್ಮಾನವೇ ಅಂತಿಮ. ಚರ್ಚೆಗೆ ಅವಕಾಶವಿಲ್ಲ.
ಸ್ಪರ್ಧೆಯಲ್ಲಿ ಭಾಗವಹಿಸುವವರು
ಸ್ಪರ್ಧಿಸುವವರ ಹೆಸರು :
ಸ್ಪರ್ಧೆಯ ಹೆಸರು :
ಸ್ಪರ್ಧೆಯ ವಿಭಾಗ:
ತರಗತಿ / ಪ್ರಾಯ:
ಮೊಬೈಲ್ ನಂಬರ್:
ಈ ಮೇಲಿನ ವಿಷಯಗಳನ್ನು ಸರಿಯಾಗಿ ತುಂಬಿಸಿ ಸಂಘದ ಅಧ್ಯಕ್ಷರಿಗೆ ವಾಟ್ಸಪ್ ಮೆಸೇಜ್ ಮಾಡಿ
ಅಧ್ಯಕ್ಷರ ಮೊಬೈಲ್ ನಂಬರ್ :
ಶಂಕರ್ ಕುಲಾಲ್ : 9164772914
ಅಧ್ಯಕ್ಷರು/ಕಾರ್ಯದರ್ಶಿ ಕುಲಾಲ ಸಂಘ ರಿ ಮೂಡಬಿದ್ರೆ