
ಮಂಗಳೂರು: ಪುಟ್ಟಣ್ಣ ಕುಲಾಲ ಪ್ರತಿಷ್ಠಾನ ಮಂಗಳೂರು ಡಾ ಅಣ್ಣಯ್ಯ ಕುಲಾಲರ ಮೂಲಕ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯಡಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಕುಲಾಲ ಸಮಾಜದ 20 ಫಲಾನುಭವಿ ಕುಟುಂಬಗಳಿಗೆ ಸಹಾಯ ನಿಧಿಯನ್ನು ಹಸ್ತಾಂತರಿಸಲಾಯಿತು.




ಪುಟ್ಟಣ್ಣ ಕುಲಾಲ ಪ್ರತಿಷ್ಠಾನದ ಸಮಾಜ ಸೇವೆಯನ್ನು ಪರಿಗಣಿಸಿ ಡಾ| ಅಣ್ಣಯ್ಯ ಕುಲಾಲರ ಆತ್ಮೀಯ ಹಿತೈಷಿಗಳಾದ ಪ್ರಕಾಶ್ ಶೆಟ್ಟಿ ಯವರು “ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ “ಯೋಜನೆಯಡಿಯಲ್ಲಿ ಕುಲಾಲ ಸಮಾಜದ ಬಡವರು ಹಾಗೂ ಅರ್ಹಫಲಾನುಭವಿಗಳಾದ
20 ಕುಟುಂಬಗಳನ್ನು ಗುರುತಿಸಿ ಸಹಾಯಹಸ್ತ ನೀಡಿದ್ದು ಶ್ಲಾಘನೀಯ ಈ ಕಾರ್ಯಕ್ಕಾಗಿ ಮಾನ್ಯ ಪ್ರಕಾಶ್ ಶೆಟ್ಟಿ ಅವರನ್ನು ಹಾಗೂ ಅವರ ಸಂಸ್ಥೆಯನ್ನು ಪುಟ್ಟಣ್ಣ ಕುಲಾಲ ಪ್ರತಿಷ್ಠಾನವು ಅಭಿನಂದಿಸುತ್ತದೆ.
ಪ್ರಕಾಶ್ ಶೆಟ್ಟಿ ಅವರ ಸಹಾಯ ಹಸ್ತ ಸಮಾಜದ ಬಂಧುಗಳಿಗೆ ದೊರೆಯುವಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸಹಕರಿಸಿದ್ದ ಯುವ ವೇದಿಕೆಯ ಸುಧಾಕರ ಸಾಲ್ಯಾನ್ ಸುಕುಮಾರ್ ಬಂಟ್ವಾಳ, ನವೀನ್ ಮಜಲ್ ಮುತುವರ್ಜಿ ವಹಿಸಿ ಕುಲಾಲ ಸಮಾಜದ ಪಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.



