ನಾವು ಯಾವತ್ತಿಗೂ ಇಂಥ ವಸ್ತುಗಳನ್ನು ನೆರೆಹೊರೆಯವರಿಂದ, ಆಪ್ತರಿಂದ ಪಡೆದು ಬಳಸಲೇಬಾರದು

0 0
Read Time:4 Minute, 0 Second

ಕೆಲವೊಮ್ಮೆ ನಮ್ಮಲ್ಲಿದ ವಸ್ತುಗಳನ್ನು ಬೇರೆಯವರ ಬಳಿ ಕೇಳಿ ಬಳಸುತ್ತೇವೆ, ಆದರೆ ನಾವು ಕೆಲವೊಂದು ವಸ್ತುಗಳನ್ನು ಬೇರೆಯವರಿಂದ ಪಡೆಯದಿರುವುದೇ ಒಳ್ಳೆಯದು, ಈ ವಸ್ತುಗಳನ್ನು ಅವರಿಂದ ಕೇಳಿ ಪಡೆದರೆ ಅದು ನಮಗೇ ಸಮಸ್ಯೆಯನ್ನುಂಟು ಮಾಡುವುದು ನೋಡಿ:

ಬೇರೆಯವರ ವೈಯಕ್ತಿಕ ವಸ್ತುಗಳನ್ನು ಅವರ ವೈಯಕ್ತಿಕ ವಸ್ತುಗಳನ್ನು ಅಂಡರ್‌ ವೇರ್‌, ಬಾಚಣಿಕೆ, ಟವಲ್‌ , ಟೂತ್‌ಬ್ರೆಷ್‌ ಹೀಗೆ ಬೇರೆಯವರ ವಸ್ತುಗಳನ್ನು ಬಳಸಲು ಹೋಗಬಾರದು. ಏಕೆಂದರೆ ಇಂಥ ವಸ್ತುಗಳು ಬೇಗ ಕಾಯಿಲೆ ಹರಡುವುದು, ಅವರಿಗಿರುವ ಸಮಸ್ಯೆ ನಮಗೆ ಬರುವುದು, ಆದ್ದರಿಂದ ಇಂಥ ವಸ್ತುಗಳನ್ನು ಬೇರೆಯವರಿಂದ ಪಡೆದು ಬಳಸಲೇಬೇಡಿ.

ಹಣ: ಕೆಲವೊಮ್ಮೆ ನಾವು ಹಣವನ್ನು ಸಾಲ ಪಡೆಯಬೇಕಾಗುತ್ತದೆ, ಆದರೆ ಅಕ್ಕಪಕ್ಕದ ಮನೆಯವರಿಂದ ಅಥವಾ ತುಂಬಾ ಆಪ್ತರಿಂದ ಸಾಲ ಪಡೆಯದಿರುವುದು ಒಳ್ಳೆಯದು, ಒಂದು ವೇಳೆ ಸಾಲ ಪಡೆದರೆ ಅದನ್ನು ಕೂಡಲೇ ಮರಳಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಸಂಬಂಧ ಹಾಳಾಗುವುದು. ಆದ್ದರಿಂದ ಸಾಲ ಕೊಡದಿರುವುದೇ ಒಳ್ಳೆಯದು.

ಬೆಲೆ ಬಾಳುವ ವಸ್ತುಗಳು: ಬೇರೆಯವರ ಬೆಲೆ ಬಾಳುವ ವಸ್ತುಗಳನ್ನು ನಾವು ಕೇಳಿ ಬಳಸ ಬಾರದು, ಉದಾಹರಣೆಗೆ ಚಿನ್ನ, ಬೇರೆಯವರ ಚಿನ್ನ ಕೇಳಿ ನಾವು ಬಳಸಿದರೆ ಒಂದು ವೇಳೆ ಅದು ನಮ್ಮಿಂದ ನಷ್ಟವಾದರೆ? ಹಾಗಾಗಿ ನಮ್ಮಲ್ಲಿ ಏನಿದೆಯೋ ಅದನ್ನು ಬಳಸಬೇಕು, ಬೇರೆಯವರ ದುಬಾರಿ ವಸ್ತುಗಳನ್ನು ಬಳಸಬೇಡಿ, ಬೇರೆಯವರ ಗಾಡಿ ಕೂಡ ನೀವು ಕೇಳಿ ಬಳಸಲು ಹೋಗಲೇಬಾರದು.

ಔಷಧ: ಬೇರೆಯವರ ಔಷಧ ನೀವು ತೆಗೆದುಕೊಳ್ಳಬಾರದು, ಇದರಿಂದ ನಿಮಗೆ ರಿಯಾಕ್ಷನ್‌ ಆಗಬಹುದು. ಆದ್ದರಿಂದ ಬೇರೆಯವರು ಬಳಸುತ್ತಿರುವ ಔಷಧವನ್ನು ವೈದ್ಯರ ಸಲಹೆ ಪಡೆಯದೆ ನೀವು ಬಳಸಲು ಹೋಗಲೇಬಾರದು, ಬದಲಿಗೆ ವೈದ್ಯರನ್ನು ಭೇಟಿಯಾಗಿ ಅವರು ಸೂಚಿಸಿದ ಔಷಧ ತೆಗೆದುಕೊಳ್ಳಿ.

ಕೆಲವೊಂದು ಸಾಧನಗಳನ್ನು ತೆಗೆದು ಬಳಸುವುದು ನಮಗೆ ಅವಶ್ಯಕವಿದೆ ಎಂದು ನಾವು ಕೆಲವು ವಸ್ತುಗಳನ್ನು ತಂದು ಬಳಸಿ ನಂತರ ಮರಳಿ ಕೊಡದೆ ಹಾಗೇ ಇಡುವ ಸ್ವಭಾವ ಹಲವರಲ್ಲಿದೆ, ಆದರೆ ಆ ಸಾಧನ ಕೊಟ್ಟುವವರೆಗೆ ಅದು ಅವರಿಗೆ ಅವಶ್ಯಕತೆ ಇರುವಾಗ ಸಿಗದಿದ್ದರೆ ತುಂಬಾನೇ ಕಿರಿಕಿರಿಯಾಗುವುದು. ಆದ್ದರಿಂದ ಈ ರೀತಿ ಮಾಡಬಾರದು. ಇದು ನಾವು ಯಾವೆಲ್ಲಾ ವಸ್ತುಗಳನ್ನು ತೆಗೆಯಬಾರದು ಎಂದು ಹೇಳಿದರೆ ಇನ್ನು ನಾವು ಯಾವುದೇ ವಸ್ತು ಆಗಲಿ ಬೇರೆಯವರಿಂದ ಕೇಳಬಾರದು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೇ ಶ್ರೀಮಂತನಾದರೂ ಅವನು ಕೂಡ ಯಾವುದೋ ಒಂದು ಸಂದರ್ಭದಲ್ಲಿ ಬೇರೆಯವರ ಹತ್ರ ಏನಾದರೂ ಬೇಕೆಂದು ಕೇಳಬೇಕಾಗುತ್ತದೆ, ಆದರೆ ಸಹಾಯ ಕೇಳುವುದಾದರೂ ಇಂಥವರ ಬಳಿ ಕೇಳಲೇಬಾರದು: ನಮ್ಮ ಬಗ್ಗೆ ಆಡಿಕೊಳ್ಳುವವರ ಬಳಿ: ಹೌದು ನಮ್ಮ ಆಡಿಕೊಂಡು ನಗುವವರ ಬಳಿ ನಾವು ಸಹಾಯ ಕೇಳಿದರೆ ಅವರು ನಮಗೆ ಸಹಾಯ ಮಾಡಿದಂತೆ ಮುಖವಾಡ ಹಾಕುತ್ತಾರೆ, ಆದರೆ ಹಿಂದಿನಿಂದ ಆಡಿಕೊಳ್ಳುತ್ತಾರೆ.

ಕರುಣೆಯಿಲ್ಲದವರ ಬಳಿ: ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳದವರ ಬಳಿ, ಕರುಣೆ ಇಲ್ಲದವರ ಬಳಿ ನಮ್ಮ ಕಷ್ಟಗಳನ್ನು ಹೇಳಿ ಏನು ಪ್ರಯೋಜನ, ಬಂಡೆ ಕಲ್ಲಿನ ಮೇಲೆ ಮಳೆ ಬಿದ್ದು ಪ್ರಯೋಜನವೇನು? ಅಂಥವರ ಬಳಿ ಏನೂ ಹೇಳಲು ಹೋಗದೇ ಇರುವುದು ಒಳ್ಳೆಯದು.

ಈಗಾಗಲೇ ಅವರು ಕಷ್ಟದಲ್ಲಿ ಇದ್ದಾಗ: ಅವರು ತುಂಬಾನೇ ಕಷ್ಟದಲ್ಲಿ ಇರುತ್ತಾರೆ, ನಮಗೆ ಅದರ ಸಂಪೂರ್ಣ ಅರಿವು ಇರುತ್ತದೆ, ಆದರೂ ಸಹಾಯ ಕೇಳುವುದು ಮಾಡಬಾರದು.

ಅವರಿಂದ ಅಪಾಯ ಉಂಟಾಗಬಹುದು ಎಂದಿದ್ದರೆ: ಕೆಲವು ವಸ್ತುಗಳ ಹತ್ರ ಸಹಾಯ ಕೇಳಿದರೆ ಮುಂದೆ ಅವರಿಂದ ನಮಗೆ ತೊಂದರೆಯಾಗಬಹುದು ಎಂದು ಅನಿಸಿದ್ದರೆ ಅವರಿಂದ ಕೂಡ ಸಾಲ ಪಡೆಯಬಾರದು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *