
ಮಂಗಳೂರು: ಅಮೂಲ್ಯ ಸೇವಾ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸುರತ್ಕಲ್ ಕುಲಾಲ ಸುಧಾರಕ ಸಂಘ ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಜಯೇಶ್ ಗೋವಿಂದ ವಹಿಸಿದ್ದರು.


ವಿಧ್ಯಾರ್ಥಿ ಜೀವನ ಮತ್ತು ಮುಂದಿನ ಜೀವನದಲ್ಲಿ ಉಜ್ವಲ ಭವಿಷ್ಯ ನಿರ್ಮಾಣದ ಕುರಿತು ಉಪನ್ಯಾಸವನ್ನು ಶ್ರೀಯುತ ದಾಮೋದರ ಶರ್ಮ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ. ಶ್ರೀ ಎ.ಎನ್. ಕುಲಾಲ್ ಮಾಲಕರು ದುರ್ಗಾ ರಬ್ಬರ್ ಇಂಡಸ್ಟ್ರೀಸ್ ಬೆಂಗಳೂರು, ಶ್ರೀ ದಿವಾಕರ್ ಬೆಂಗಳೂರು. , ಲಯನ್. ಅನಿಲ್ ದಾಸ್ ಜಿಲ್ಲಾ ಅಧ್ಯಕ್ಷರು, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಒಕ್ಕೂಟ. ದ. ಕ. ಜಿಲ್ಲೆ, ಡಾ. ಅಣ್ಣಯ್ಯ ಕುಲಾಲ್, ಶ್ರೀಮತಿ ಸರಸ್ವತಿ ಬಂಟ್ವಾಳ ಉಪನ್ಯಾಸಕಿ, ಎಂ.ಜಿ.ಎಮ್ ಕಾಲೇಜು ಉಡುಪಿ, ದಿನಕರ್ ಅಂಚನ್ ಅಧ್ಯಕ್ಷರು, ಕುಲಾಲ ಸಂಘ ಸುರತ್ಕಲ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ದ.ಕ ಜಿಲ್ಲೆಯಾಧ್ಯಂತವಿರುವ ಸಮಾಜದ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಈ ಪುರಸ್ಕಾರವನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರಕಾಶ್ ಬಾಲ, ಜಯ ಪ್ರಕಾಶ್, ಕಾರ್ಯದರ್ಶಿ ದಿನಾಕರ್ ಎನ್, ಜೊತೆ ಕಾರ್ಯದರ್ಶಿಗಳಾದ ದಿನೇಶ್ ಅಂಚನ್, ರಾಜೇಶ್ ಹೆಚ್.ಬಿ., ಖಜಾಂಜಿ ಕಿರಣ್ ಕುಮಾರ್ ಸೇರಿದಂತೆ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.
ಗಣೇಶ್ ಎಂ.ಆರ್.ಪಿ.ಎಲ್. ಸ್ವಾಗತಿಸಿದರು, ಜಿಲ್ಲೆ ಯಿಂದ ಬಂದ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.. ಕುಲಾಲ ಸಮುದಾಯದ ಹಿರಿಯರು ಕಿರಿಯರು ಬಂಧು ಮಿತ್ರರು ಅಮೂಲ್ಯ ಪ್ರತಿಷ್ಠಾನದ ಇಂದಿನ ಕಾಲಘಟ್ಟದಲ್ಲಿ ನೀಡಿದ ಮತ್ತು ಅವಶ್ಯವಿರುವ ಈ ಅತೀ ಅಮೂಲ್ಯ ಸೇವೆಯನ್ನು ಮುಕ್ತ ಮನಸ್ಸಿನಿಂದ ಕೊಂಡಾಡಿ ಅಭಿನಂದಿಸಿದರು.