
Read Time:1 Minute, 19 Second
ಉಳ್ಳಾಲ: ವಿಕ್ರಂ ಮತ್ತು ವಿಶ್ವನಾಥ್ ಎಂಬವರ ನಡುವೆ ನಡೆದ ಜಗಳದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.ದಿನಾಂಕ 08-09-2025 ರಂದು ರಾತ್ರಿ ಉಚ್ಚಿಲ ರೈಲ್ವೇ ಕ್ರಾಸ್ ಬಳಿ ಕಾರು-ಸ್ಕೂಟರ್ ನಡುವೆ ತಕರಾರು ಉಂಟಾಗಿದ್ದು, ಬಳಿಕ ವಿಷಯ ಗಂಭೀರವಾಗಿ ಬೆಳೆದಿದೆ. ವಿಶ್ವನಾಥ್ ಹಾಗೂ ಅವರ ಕುಟುಂಬ ಸದಸ್ಯರು, ವಿಕ್ರಂ ವಿರುದ್ಧ ಬೆದರಿಕೆ ಹಾಕಿದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಅದಕ್ಕೆ ಪ್ರತಿಯಾಗಿ ವಿಕ್ರಂ ಕೂಡ ವಿಶ್ವನಾಥ್ ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾರೆ.


ಪೊಲೀಸರ ಪ್ರಾಥಮಿಕ ತನಿಖೆಯಿಂದ, ವಿಕ್ರಂ ರವರ ವಿರುದ್ಧ ವಿಶ್ವನಾಥ್ ಕುಟುಂಬವು ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ವಿಶ್ವನಾಥ್ ರವರ ಪುತ್ರ ನವೀನ್ ಚಂದ್ರ ಎಂಬಾತನನ್ನು ಸೆಪ್ಟೆಂಬರ್ 10ರಂದು ಪೊಲೀಸರು ಬಂಧಿಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.