ಜುಲೈ 22ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಅಬುಧಾಬಿಗೆ ದಿನಂಪ್ರತಿ ಸಂಚಾರ

0 0
Read Time:1 Minute, 33 Second

ಮಂಗಳೂರು : ಮಂಗಳೂರಿನಿಂದ ಅಬುಧಾಬಿಗೆ ಸಂಚರಿಸುವ ವಿಮಾನಗಳ ಸಂಖ್ಯೆ ಹೆಚ್ಚಿಸಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ಧರಿಸಿದ್ದು, ವಾರದಲ್ಲಿ 4 ದಿನಗಳ ಸಂಚರಿಸುತ್ತಿದ್ದ ವಿಮಾನಗಳು ಜುಲೈ 22ರಿಂದ ದಿನಂಪ್ರತಿ ಕಾರ್ಯಾಚರಿಸಲಿದೆ. ಇಂಡಿಗೋ 4 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ 1 ವಿಮಾನ ಸೇರಿದಂತೆ ದಿನನಿತ್ಯ 5 ವಿಮಾನಗಳು ಬೆಂಗಳೂರು – ಮಂಗಳೂರು ನಡುವೆ ಕಾರ್ಯಾಚರಿಸಲಿವೆ. ಜುಲೈ 8ರಿಂದ ಈ ಸಂಖ್ಯೆ 6ಕ್ಕೆ ಏರಿಕೆಯಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ 2ನೇ ವಿಮಾನ ಬೆಂಗಳೂರಿನಿಂದ ಮಂಗಳೂರಿಗೆ ಯಾನ ಆರಂಭಿಸುತ್ತಿದೆ. ಇದು ಜು.22ರಿಂದ ಲಭ್ಯವಾಗಲಿದ್ದು, ಇದು ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸಲಿದ್ದು, ಈ ವಿಮಾನ ಮಂಗಳೂರಿಗೆ ಬಂದು ಅಬುಧಾಬಿಗೆ ಪ್ರಯಾಣಿಸಲಿದೆ. ಆಗಸ್ಟ್ 1ರಿಂದ ಬೆಂಗಳೂರು – ಮಂಗಳೂರು ಸೆಕ್ಟರ್ನಲ್ಲಿ ವಾರದಲ್ಲಿ ಮೂರು ದಿನ (ಸೋಮ, ಬುಧ ಮತ್ತು ಶುಕ್ರವಾರ) ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಇನ್ನೊಂದು ವಿಮಾನ ಸೇವೆ ಆರಂಭಿಸಲಿದೆ. ಮುಂಬಯಿ-ಮಂಗಳೂರು ಸೆಕ್ಟರ್‌ನಲ್ಲಿಯೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಧ್ಯಾಹ್ನದ ನಂತರ ವಿಮಾನವನ್ನು ಆರಂಭಿಸಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *