ಅಹಮದಾಬಾದ್‌ನಲ್ಲಿ ವಿಮಾನ ಅಪಘಾತ: ಪತ್ತನಂತಿಟ್ಟ ನರ್ಸ್ ರಂಜಿತಾ ನಿಧನ

0 0
Read Time:1 Minute, 58 Second

ಕೇರಳ : ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನ ಅಪಘಾತದಲ್ಲಿ ಕೇರಳ ಮೂಲದ ನರ್ಸ್ ಒಬ್ಬರು ಸಾವನಪ್ಪಿದ್ದಾರೆ. ರಂಜಿತಾ ಗೋಪಕುಮಾರನ್ ಅವರು ಕೇರಳದ ಪತ್ತನಂತಿಟ್ಟ ಜಿಲ್ಲೆಯವರು. ಯುನೈಟೆಡ್ ಕಿಂಗ್‌ಡಂನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಮನೆ ನಿರ್ಮಾಣದ ಮೇಲ್ವಿಚಾರಣೆಗಾಗಿ ರಜೆ ಮೇಲೆ ಕೇರಳಕ್ಕೆ ಬಂದಿದ್ದರು. ರಜೆ ಮುಗಿಸಿ ವಾಪಸ್ ಲಂಡನ್ ಗೆ ಹೊರಟಿದ್ದರು.

ರಂಜಿತಾ ಅವರ ಕನಸಿನ ಹೊಸ ಮನೆಯ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಮಗಳನ್ನು ಕಳೆದುಕೊಂಡು ದುಃಖಿಸುತ್ತಿರುವ ತಾಯಿ, ತಾಯಿಗಾಗಿ ಅಳುತ್ತಿರುವ 10 ನೇ ತರಗತಿಯಲ್ಲಿ ಓದುತ್ತಿರುವ ಮಗ ಮತ್ತು 3 ನೇ ತರಗತಿಯಲ್ಲಿ ಓದುತ್ತಿರುವ ಮಗಳು ರಂಜಿತಾ ಅವರ ತಾಯಿ ಮತ್ತು ಇಬ್ಬರು ಮಕ್ಕಳು ಮಸ್ಕತ್‌ನಲ್ಲಿ ಅವರೊಂದಿಗೆ ಇದ್ದರು. ಮಕ್ಕಳು ಮಸ್ಕತ್‌ನಲ್ಲಿರುವ ಇಂಡಿಯನ್ ಶಾಲೆಯಲ್ಲಿ ಓದುತ್ತಿದ್ದರು. ರಂಜಿತಾ ಯುಕೆಯಲ್ಲಿ ನರ್ಸ್ ಕೆಲಸ ಸಿಕ್ಕಿ ಹಿನ್ನಲೆ ತನ್ನ ಮಕ್ಕಳು ಮತ್ತು ತಾಯಿಯನ್ನು ಕೇರಳಕ್ಕೆ ವಾಪಾಸ್ ಕಳುಹಿಸಿದ್ದರು.

ರಂಜಿತಾ ಮೂರು ದಿನಗಳ ಹಿಂದೆ ಯುಕೆಯಿಂದ ಮನೆಗೆ ಬಂದಿದ್ದರು. ಅವರಿಗೆ ರಾಜ್ಯ ಆರೋಗ್ಯ ಸೇವೆಯಲ್ಲಿ ನರ್ಸ್ ಕೆಲಸ ಸಿಕ್ಕಿತ್ತು. ಆದರೆ ಅವರ ಹೊಸ ಮನೆಯ ನಿರ್ಮಾಣದ ಮೇಲ್ವಿಚಾರಣೆಗಾಗಿ ರಜೆಯ ಮೇಲೆ ಮನೆಗೆ ಬಂದಿದ್ದರು. ಅವರು ಸುಮಾರು ಒಂದು ವರ್ಷದ ಹಿಂದೆ ಯುಕೆಗೆ ತೆರಳಿದಾಗಿನಿಂದ, ಅಲ್ಲಿ ತಮ್ಮ ಕೆಲಸದ ಒಪ್ಪಂದವನ್ನು ಪೂರ್ಣಗೊಳಿಸಲು ಬಯಸುತ್ತಿದ್ದರು. ಕೇರಳಕ್ಕೆ ಮರಳಲು ಮತ್ತು ರಾಜ್ಯ ಆರೋಗ್ಯ ಸೇವೆಯೊಂದಿಗೆ ಕೆಲಸ ಮಾಡಲು ಯೋಜಿಸಿದ್ದರು ಎಂದು ತಿಳಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *