
Read Time:1 Minute, 6 Second
ಬೆಳ್ತಂಗಡಿ: ಧರ್ಮಸ್ಥಳ ಮೂಲದ ಏರೋಸ್ಪೇಸ್ ಇಂಜಿನಿಯರ್ ಯುವತಿಯೋರ್ವಳು ಪಂಜಾಬ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇಪ್ಪತ್ತೆರಡು ವರ್ಷದ ಆಕಾಂಕ್ಷ ಮೃತ ದುರ್ದೈವಿ.


ಧರ್ಮಸ್ಥಳ ಬೋಳಿಯಾರ್ ನಿವಾಸಿಗಳಾದ ಸುರೇಂದ್ರ ಹಾಗುಹ ಸಿಂಧೂದೇವಿ ದಂಪತಿಯ ಮಗಳು ಆಕಾಂಕ್ಷ. ಈಕೆ ಪಂಜಾಬ್ ನ ಫಗ್ವಾಡಾ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುಗಿಸಿ ಆರು ತಿಂಗಳ ಹಿಂದೆಯಷ್ಟೇ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ವೃತ್ತಿ ಜೀವನ ಶುರು ಮಾಡಿದ್ದರು.
ಶೈಕ್ಷಣಿಕ ಪ್ರಮಾಣ ಪತ್ರಕ್ಕಾಗಿ ಪಂಜಾಬ್ ಗೆ ಆಗಮಿಸಿದ್ದ ಆಕಾಂಕ್ಷ ನಂತರ ಮನೆಯವರ ಜೊತೆ ಪೋನ್ ಮಾಡಿ ಮಾತನಾಡಿದ್ದಾರೆ. ಇವರು ಜಪಾನ್ ನಲ್ಲಿ ಉದ್ಯೋಗ ಪಡೆದಿದ್ದರು. ಆದರೆ ದಿಢೀರ್ ಇವರ ಸಾವಿಗೆ ಕಾರಣ ಏನು ಎಂಬುವುದು ತಿಳಿದುಬಂದಿಲ್ಲ. ಮನೆಯವರು ಪಂಜಾಬ್ ಗೆ ತೆರಳಿದ್ದಾರೆ.

