ಅಡ್ಕ ಕುಲಾಲ ಬಂಗೇರ ಕುಟುಂಬ ನಾಗಮೂಸ್ಥಾನದ ಅಧ್ಯಕ್ಷರಾಗಿ ಖ್ಯಾತ ನ್ಯಾಯವಾದಿ ರಾಮಪ್ರಸಾದ್ ಮರು ಆಯ್ಕೆ

0 0
Read Time:2 Minute, 33 Second

ಅಡ್ಕ ಕುಲಾಲ ಬಂಗೇರ ನಾಗಮೂಲಸ್ಥಾನದ ಕುಟುಂಬಸ್ಥರ ಸಭೆಯು ದಿನಾಂಕ 02.06.2024ನೇ ಆದಿತ್ಯವಾರದಂದು ನಡೆದಿರುತ್ತದೆ. ಸಭೆಯಲ್ಲಿ ಎಲ್ಲಾ ಕುಟುಂಬಸ್ಥರು ಒಗ್ಗಟ್ಟಿನಿಂದ ಮುಂದಿನ ಕಾರ್ಯಕ್ರಮಗಳನ್ನು ನಡೆಸುವುದಕ್ಕೋಸ್ಕರ ಸಮಿತಿ ರಚನೆಯ ಬಗ್ಗೆ ಚರ್ಚಿಸಲಾಯಿತು. ಕುಟುಂಬದ ಯಜಮಾನರಾದ ಶ್ರೀ ಸೀತಾರಾಮ ಬಂಗೇರರವರು ಮಾತನಾಡಿ ಮುಂದಿನ ಎಲ್ಲಾ ಕಾರ್ಯಕ್ರಮಗಳು ಎಲ್ಲಾ ರೀತಿಯಲ್ಲಿ ಒಳ್ಳೆಯ ರೀತಿಯಿಂದ ನಡೆಯಬೇಕೆಂದು ತಿಳಿಸಿದರು.


ಅಧ್ಯಕ್ಷರಾದ ಶ್ರೀ ರಾಮಪ್ರಸಾದ್ ರವರು ಮಾತನಾಡಿ ಈವರೆಗಿನ ಎಲ್ಲಾ ವಿಚಾರಗಳನ್ನು ಸಭೆಗೆ ತಿಳಿಸಿದರಲ್ಲದೆ, ಮುಂದೆ ಹೊಸ ಸಮಿತಿ ರಚನೆಯಾಗಬೇಕೆಂದು ವಿನಂತಿಸಿದರು. ಸೇರಿದ ಕುಟುಂಬಸ್ಥರು ಮೊದಲಿನ ಸಮಿತಿಯೇ ಮುಂದುವರಿಯಬೇಕು ಮತ್ತು ಅದಕ್ಕೆ ಕೆಲವರನ್ನು ಸೇರ್ಪಡೆ ಮಾಡಬೇಕು ಹಾಗೂ ಶ್ರೀ ರಾಮಪ್ರಸಾದ್ ರವರೇ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕುಟುಂಬಸ್ಥರ ಪ್ರೀತಿಯ ಒತ್ತಾಯವನ್ನು ಗೌರವಿಸಿ ಶ್ರೀ ರಾಮಪ್ರಸಾದ್ ರವರು ಅಧ್ಯಕ್ಷರಾಗಿ ಮುಂದುವರಿಯಲು ಒಪ್ಪಿಕೊಂಡರು. ಅದೇ ರೀತಿ ಶ್ರೀ ಸೀತಾರಾಮ ಬಂಗೇರರವರನ್ನು ಕುಟುಂಬದ ಯಜಮಾನರಾಗಿ ಗೌರವಿಸಲಾಯಿತು. ಕಾರ್ಯದರ್ಶಿಯಾಗಿ ಶ್ರೀ ಉದಯ ಕುಮಾರ್ ಉಳ್ಳಾಲಬೈಲು, ಖಜಾಂಚಿಯಾಗಿ ಶ್ರೀ ಲೋಕೇಶ್ ಕುಂಪಲ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸೇವಾಸಮಿತಿ ಯ ಅಧ್ಯಕ್ಷರಾಗಿ ಶ್ರೀ ಉದಯ ಅಡ್ಕ ರವರನ್ನು ಆಯ್ಕೆ ಮಾಡಲಾಯಿತು.


ಈವರೆಗಿನ ಆಯವ್ಯಯ ವನ್ನು ಸಭೆಗೆ ಮಂಡಿಸಿದ ನಂತರ ಮೂಲಸ್ಥಾನಕ್ಕೆ ಸಂಬಂದಿಸಿದ ಕೀ, ನಗದು ಹಾಗೂ ಇನ್ನಿತರ ದಾಖಲೆಗಳನ್ನು ಸಮಿತಿಗೆ ಹಸ್ತಾಂತರಿಸಲಾಯಿತು. ಅಡ್ಕ ಕುಟುಂಬವನ್ನು ಒಗ್ಗೂಡಿಸಲು ಪ್ರಮುಖ ಪಾತ್ರ ವಹಿಸಿದ ಶ್ರೀ ಕೃಷ್ಣ ಶಿವಕೃಪಾ ಇಂದು ನಮ್ಮೊಂದಿಗೆ ಉಪಸ್ಥಿತರಿದ್ದರು. ಅವರಿಗೆ ಕುಟುಂಬದ ಪರವಾಗಿ ಧನ್ಯವಾದವನ್ನು ಸಲ್ಲಿಸಲಾಯಿತು.
ಇನ್ನು ಮುಂದೆ ಮೂಲಸ್ಥಾನದ ಅಭಿವೃದ್ಧಿ ಗೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಿದರು.

ಅಧ್ಯಕ್ಷರಾಗಿ ಮರು ಆಯ್ಕೆಗೊಂಡ ಶ್ರೀ ರಾಮಪ್ರಸಾದ್ ರವರಿಗೆ ಅಡ್ಕ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *