
Read Time:48 Second
ಬಂಟ್ವಾಳ: ಬಂಟ್ವಾಳ ತಾಲೂಕಿನ ಅಡ್ಡೂರು – ಪೊಳಲಿ ಸಂಪರ್ಕ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ಏಕಾಏಕಿ ನಿಷೇಧಿಸಿದ್ದು ಸಂಚಾರ ಹಾಗು ವಸ್ತುಗಳ ಸಾಗಾಟಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೇವಲ ಎರಡು ದಿನಗಳ ಮುಂಚೆ ಅಧಿಕಾರಿಗಳು ಬೋರ್ಡ್ ಅಳವಡಿಸಿದ್ದು, ನಿನ್ನೆ ಪಿಲ್ಲರ್ ಹಾಕಿ ಇವತ್ತು ಘನವಾಹನಗಳ ಸಂಚಾರ ನಿಷೇಧಿಸಲು ಅಡ್ಡಲಾಗಿ ತಡೆ ಕಂಬ ಹಾಕಿದ್ದಾರೆ.
ಏಕಾಏಕಿ ಈ ನಿರ್ಧಾರವನ್ನು ಜಿಲ್ಲಾಡಳಿತ ಏಕೆ ತೆಗೆದುಕೊಂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ.