
ಮಂಗಳೂರು: ನಗರದ ಮರೋಳಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ಪ್ರಿಂಗ್ ಹಾಗೂ ಇತರ ವಸ್ತುಗಳ ತಯಾರಿಕಾ ಕಂಪನಿಯಲ್ಲಿ ನಡೆದ ಅವಘಡದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಮೃತಪಟ್ಟಿದ್ದಾರೆ. ಕಂಕನಾಡಿ ಗರೋಡಿ ಬಳಿಯ ನಿವಾಸಿ ಪ್ರದೀಪ್ ಗರೋಡಿ(52) ಮೃತಪಟ್ಟವರು. ಜು.18ರಂದು ಪ್ರದೀಪ್ ಗರೋಡಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಪ್ರಿಂಗ್‌ನಲ್ಲಿ ಪ್ಲೇಟ್ ಮುರಿದು ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಈ ಬಗ್ಗೆ ಅವರ ಪತ್ನಿ ನಳಿನಿಯವರು ಪೊಲೀಸ್ ದೂರು ದಾಖಲಿಸಿದ್ದಾರೆ. ತಮ್ಮ ಪತ್ನಿ ಕೆನರಾ ಸ್ಪ್ರಿಂಗ್ ಎಂಬ ಕಂಪನಿಯಲ್ಲಿ ಗ್ರೇಡ್ -V ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಪತಿ ಜು.8ರಂದು 2ನೇ ಪಾಳಿಯ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿ ರೇಪ್ಟಿಕೇಷನ್ ಮಿಷನ್‌ನಲ್ಲಿ ಕೆಲಸಮಾಡುವಾಗ ಸ್ಪ್ರಿಂಗ್ ಪ್ಲೇಟ್ ತುಂಡಾಗಿ ಮುಖಕ್ಕೆ ಬಡಿದು ಅವರು ಪ್ರಜ್ಞೆ ತಪ್ಪಿ ಹಿಂದಕ್ಕೆ ಬಿದ್ದು ತಲೆಗೆ ಗಾಯವಾಗಿತ್ತು. ತಕ್ಷಣ ಜೊತೆಗೆ ಕೆಲಸ ಮಾಡುತ್ತಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಮ್ಮ ಪತಿ ಕೆಲಸ ಮಾಡುವ ಸ್ಥಳದಲ್ಲಿ ಕಂಪನಿ ಯಾವುದೇ ಸುಕ್ಷತಾ ಕ್ರಮ ಕೈಗೊಳ್ಳದ ನಿರ್ಲಕ್ಷ್ಯ ವಹಿಸುತ್ತಿದೆ. ಮುಂಜಾಗ್ರತಾ ಕೈಗೊಳ್ಳದಿದ್ದರಿಂದಲೇ ಈ ಅವಘಡ ಸಂಭವಿಸಿದೆ. ಆದ್ದರಿಂದ ಕಂಪನಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ದೂರಿದ್ದಾರೆ.

