
ಚಿತ್ರದುರ್ಗ : ಚಿತ್ರದುರ್ಗದ ಎಕ್ಸ್‌ಪ್ರೆಸ್‌ವೇ ನಲ್ಲಿ ರಸ್ತೆ ದಾಟುತ್ತಿರುವ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನಪ್ಪಿದ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಮಹಿಳೆ 10 ಅಡಿಗೂ ಹೆಚ್ಚು ಎತ್ತರಕ್ಕೆ ಹಾರಿ ಬಿದ್ದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.


30 ಸೆಕೆಂಡುಗಳ ಸಿಸಿಟಿವಿ ಕ್ಲಿಪ್‌ನಲ್ಲಿ ಚಿತ್ರದುರ್ಗದ ಎಕ್ಸ್‌ಪ್ರೆಸ್‌ವೇ ನಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ರಸ್ತೆ ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರೊಂದು ಆಕೆಗೆ ಢಿಕ್ಕಿಯಾಗಿದ್ದು, ಕಾರು ಢಿಕ್ಕಿಯಾದ ರಭಸಕ್ಕೆ ಮಹಿಳೆ ಸುಮಾರು 10 ಅಡಿಗಳಷ್ಚು ಮೆಲಕ್ಕೆ ಹಾರಿ ಸುಮಾರು 20 ಅಡಿಗಳಷ್ಟು ದೂರದಲ್ಲಿ ಬಿದಿದ್ದಾರೆ. ಕೆಳಕ್ಕೆ ಬಿದ್ದ ರಭಸಕ್ಕೆ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಹಿಳೆ ಮತ್ತು ಮಕ್ಕಳು ಹೆದ್ದಾರಿಯ ವಿಭಜಕದಿಂದ ಎರಡನೇ ಲೇನ್ ತಲುಪಿದಾಗ ಕಾರು ಅವರಿಗೆ ಡಿಕ್ಕಿ ಹೊಡೆದು ಅತಿ ವೇಗದಲ್ಲಿ ಪರಾರಿಯಾಗಿದೆ. ಡಿಕ್ಕಿಯಾಗುತ್ತಿದ್ದಂತೆಯೇ ಮಹಿಳೆ ಗಾಳಿಯಲ್ಲಿ ಹಾರಿ ಮೂರು ಲೇನ್‌ಗಳ ದೂರದಲ್ಲಿ ನೆಲಕ್ಕೆ ಬಿದ್ದಿದ್ದು, ಆಕೆಯನ್ನು ಹಿಂಬಾಲಿಸುತ್ತಿದ್ದ ಇನ್ನೊಬ್ಬ ಮಹಿಳೆ ಮತ್ತು ಮಕ್ಕಳು ಸಾವಿನಿಂದ ಪಾರಾಗಿದ್ದಾರೆ. ಢಿಕ್ಕಿ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

