
Read Time:1 Minute, 18 Second
ಕುಂಬಳೆ: ಮಂಗಲ್ಪಾಡಿ ಪ್ರತಾಪ ನಗರ ನಿವಾಸಿ, ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಧನರಾಜ್ ಪೂಜಾರಿ (44) ಡಿ. 14ರಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟರು.


ಮೃತರು ಅವಿವಾಹಿತರಾಗಿದ್ದು, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಕುಂಬಳೆಯಿಂದ ಸ್ಕೂಟರಿನಲ್ಲಿ ಮನೆಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66ರ ಬಂದ್ಯೋಡು ಸಮೀಪದ ಶಿರಿಯದಲ್ಲಿ ಎದುರುಗಡೆಯಿಂದ ಬಂದ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡರು. ತತ್‌ಕ್ಷಣ ಅವರನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರು.


ಕೇರಳ ರಾಜ್ಯ ಸರಕಾರಿ ಬಸ್ಸಿನಲ್ಲಿ ಅರೆಕಾಲಿಕ ನಿರ್ವಾ ಹಕರಾಗಿದ್ದ ಅವರು ಆ ಬಳಿಕ ಸಾಮಾಜಿಕ ಮತ್ತು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಯುವ ಮೋರ್ಚಾದ ನಾಯಕರಾಗಿದ್ದ ಅವರು ಪ್ರಸ್ತುತ ಕುಂಬಳೆ ಮಂಡಲ ಕಾರ್ಯದರ್ಶಿಯಾಗಿದ್ದರು. ಪ್ರತಾಪ ನಗರದ ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಸ್ಥಾಪಕರಾಗಿದ್ದರು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
