
Read Time:1 Minute, 17 Second
ಮಂಗಳೂರು: ಇಂದಿನಿಂದ 3 ದಿನ (ನ. 11 ರಿಂದ 13) ಉಳ್ಳಾಲ ಪ್ರೆಸ್ ಕ್ಲಬ್ (ತೊಕ್ಕೋಟ್ಟು) ನಲ್ಲಿ ಆಧಾರ್ ಶಿಬಿರ ನಡೆಯಲಿದೆ.


ಈ ಶಿಬಿರದಲ್ಲಿ ಹೊಸ ಆಧಾರ್ ಕಾರ್ಡ್, ಹೆಸರು, ಜನ್ಮ ದಿನಾಂಕ, ಲಿಂಗ, ಮೊಬೈಲ್ ನಂಬರ್, ಇಮೇಲ್ ಐಡಿ, ವಿಳಾಸ ತಿದ್ದುಪಡಿ, ಪೊಟೊ ಅಪ್ಡೇಟ್, ಮಕ್ಕಳ 5 ವರ್ಷದ ಮತ್ತು 15 ವರ್ಷದ ಅಪ್ಡೇಟ್, ಪ್ರತಿ 10 ವರ್ಷಕ್ಕೊಮ್ಮೆ ಮಾಡಿಕೊಳ್ಳುವ ಅಪ್ಡೇಟ್ ಗಳನ್ನು ಮಾಡಲಾಗುವುದು.
- ಮಕ್ಕಳಿಗೆ 5 ವರ್ಷ ಮತ್ತು 15 ವರ್ಷ ತುಂಬಿದ ಕೂಡಲೇ ಆಧಾರ್ ಬಯೋಮೆಟ್ರಿಕ್ ಅಪ್ಡೇಡ್ ಮಾಡಿಸಿಕೊಳ್ಳಬೇಕು.
2. ಉಳಿದ ಎಲ್ಲರೂ ಪ್ರತಿ 10 ವರ್ಷಕ್ಕೊಮ್ಮೆ ಆಧಾರ್ ನವೀಕರಿಸುವುದು ಕಡ್ಡಾಯವಾಗಿದೆ.


3. ಸರಕಾರಿ ಸವಲತ್ತು ಪಡೆಯಲು, ಆಸ್ತಿ ನೋಂದಣಿ ಸೇರಿದಂತೆ ಇತರ ಸೌಲಭ್ಯ ಪಡೆಯಲು ಆಧಾರ್ ಬಯೋಮೆಟ್ರಿಕ್/ಪೊಟೊ ಅಪ್ಡೇಟ್ ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ.

ಆಧಾರ್ ಅಪ್ಡೇಟ್ ಮಾಡಿಕೊಳ್ಳದೆ ಇದ್ದರೆ, ನಿಮ್ಮ ಆಧಾರ್ ನಿಷ್ಕ್ರೀಯ/ರದ್ದು (Suspend / Cancel) ಗೊಳ್ಳುವ ಸಾಧ್ಯತೆಗಳು ಇರುತ್ತದೆ.