
Read Time:44 Second
ಪಶ್ಚಿಮ ಬಂಗಾಳದಲ್ಲಿ ಬಾಗಲಕೋಟೆ ಮೂಲದ ಯೋಧ ಒಬ್ಬರು ಹುತಾತ್ಮರಾಗಿದ್ದಾರೆ. ಬಿಎಸ್‌ಎಫ್ ಯೋಧ ಉಮೇಶ ದಬಗಲ್ (33) ಎನ್ನುವವರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.


ಗುಂಡು ತಗುಲಿ ಉಮೇಶ್ ದಬಗಲ್ ಹುತಾತ್ಮ ರಾಗಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ.ಉಮೇಶ್ ದಬಗಲ್ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ.ಕಳೆದ 13 ವರ್ಷದಿಂದ ಬಿಎಸ್‌ಎಫ್ ನಲ್ಲಿ ಉಮೇಶ್ ಸೇವೆ ಸಲ್ಲಿಸುತ್ತಿದ್ದರು.
ನಾಳೆ ಉಮೇಶ್ ಅವರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತಲುಪಲಿದೆ.

