
ಎ.ಐ.ಸಿ.ಸಿ. ಮಾನವ ಹಕ್ಕು ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ 3ನೇ ವರ್ಷದ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮ ಮಂಗಳೂರಿನ ಬಳ್ಳಾಲಭಾಗ್ ಕಚೇರಿಯಲ್ಲಿ ನಡೆಯಿತು.



ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ಸಮ್ಮುಖದಲ್ಲಿ ಮುಖ್ಯ ಆತಿಥಿಗಳಾದ ಶ್ರೀ ಜಿನರಾಜ್ ಸಾಲಿಯಾನ್ ರವರು ದ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೇ ನೀಡಿದರು. ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾನವ ಹಕ್ಕು ಇದರ ಅಧ್ಯಕ್ಷರಾದ ಶ್ರೀ ಪ್ರಸಾದ್ ಹಾಗೂ ದಾಸ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಲಯನ್ ಅನಿಲ್ ದಾಸ್ ಹಾಗೂ ಮುಖ್ಯ ಆತಿಥಿಗಳಾದ ಶ್ರೀ ಜಿನರಾಜ್ ಸಾಲಿಯಾನ್ ಉಪಸ್ಥಿತರಿದ್ದರು. ವೇದಿಕೆ ಗಣ್ಯರು ಮಾತನಾಡಿ ಸ್ವಾತಂತ್ರದ ಹೋರಾಟದಲ್ಲಿ ನಮ್ಮ ಹಿರಿಯರ ತ್ಯಾಗ ಬಲಿದಾನ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಸ್ವಾತಂತ್ರ ಹೋರಾಟದ ಅರಿವು ಮತ್ತು ಅದರ ಅವಶ್ಯಕತೆ ಬಗ್ಗೆ ಅರಿವು ಮುಡಿಸೋ ಕಾರ್ಯದ ಮಹತ್ವವನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾನವ ಹಕ್ಕು ಇದರ ಉಪಾಧ್ಯಕ್ಷರಾದ ನವೀನ್ ಜಿ, ಪಿ ಆರ್ ಓ ಕ್ಲಮೆಂಟ್ ಡಿಸೋಜ, ಯಶವಂತ್ ಮೆಂಡನ್, ರಾಕೇಶ್ ಡಿಸೋಜ, ವೆಂಕಟೇಶ್ವರ ರೈ ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಮೆಲ್ವಿನ್ ಡಿಕುನ್ಹ ಕಾರ್ಯಕ್ರಮ ನೀರೂಪಿಸಿ ದರು.ಬಹಳ ಶಿಸ್ತು ಮತ್ತು ಸರಳವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಿದರು.


