ಮನೆ ಕಳ್ಳತನ ಪ್ರಕರಣದ ಆರೋಪಿ ಬಂಧನ..!!

0 0
Read Time:1 Minute, 32 Second

ಉಡುಪಿಯ ಒಳಕಾಡು ಮನೆಯೊಂದರಿಂದ ಚಿನ್ನಾಭರಣ ಕಳವುಗೈದ ಆರೋಪಿಯನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕುಕ್ಕಿಕಟ್ಟೆ ನಿವಾಸಿ ಸುಕೇಶ್ ನಾಯ್ಕ್ (37) ಬಂಧಿತ ಆರೋಪಿ. ಡಿ.30ರಂದು  ಶೈಲಾ ವಿಲ್ಹೆಲ್ ಮೀನಾ ಎಂಬವರ ಮನೆಯಲ್ಲಿ  ಸುಮಾರು 548.31 ಗ್ರಾಂ ಚಿನ್ನಾಭರಣ  ಹಾಗೂ ಮೊಬೈಲ್ ಫೋನ್ ನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯನ್ನು ಉಡುಪಿ ನಗರದ ಕಿನಿಮೂಲ್ಕಿ ಹಿರೇನ್‌ ಬಾರ್‌ ಬಳಿ ಬಂಧಿಸಲಾಗಿದೆ. ಬಂಧಿತನಿಂದ  65,79,720 ರೂ ಮೌಲ್ಯದ  ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ದ ಈಗಾಗಲೇ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್‌  ಠಾಣೆಗಳಲ್ಲಿ ಒಟ್ಟು  11 ಮನೆಕಳ್ಳತನ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಉಡುಪಿ ನಗರ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದ್ದು 4 ಪ್ರಕರಣಗಳಲ್ಲಿ ಶಿಕ್ಷೆಯಾಗಿರುತ್ತದೆ. ಹಿರಿಯಡ್ಕ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 1 ಪ್ರಕರಣದಲ್ಲಿ  ಶಿಕ್ಷೆಯಾಗಿರುತ್ತದೆ, ಬ್ರಹ್ಮಾವರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿರುತ್ತದೆ ಹಾಗೂ ಮಣಿಪಾಲ‌ ಠಾಣೆಯಲ್ಲಿ 1 ಪ್ರಕರಣವು ನ್ಯಾಯಲಯದ ವಿಚಾರಣೆಯಲ್ಲಿರುತ್ತದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *