
Read Time:53 Second
ಮಂಗಳೂರು: ಗಾಳಿ ಮಳೆಗೆ ಮನೆ ಕುಸಿದು ಬಾಲಕ ಸಾವನ್ನಪ್ಪಿದ ಘಟನೆ ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಜೋಕಟ್ಟೆ ಬಳಿ ನಡೆದಿದೆ.


ಮೃತ ದುರ್ದೈವಿಯನ್ನು ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮಂಗಳೂರು ಭಾಗದಲ್ಲಿ ಭಾರೀ ಗಾಳಿ ಮಳೆ ಸುರಿಯುತ್ತಿತ್ತು. ಭಾರೀ ಗಾಳಿ-ಮಳೆ ಪರಿಣಾಮ ಜೋಕಟ್ಟೆಯ ಮನೆಯೊಂದರ ಮೇಲೆ ತಡೆಗೋಡೆ ಕುಸಿದಿದೆ.
ಗ್ರಹಚಾರದ ಅಥಿತಿಯಾಗಿದ್ದ ಬಾಲಕನ ಮೇಲೆ ಗೋಡೆ ಕುಸಿದು ಸಾವನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಬಂದಿದ್ದು ಬಾಲಕನ ಮೃತದೇಹವನ್ನು ಹೊರ ತೆಗೆಯಲಾಗಿದೆ.