ಕುಲಾಲ ಚಾವಡಿಯ ಪುಸ್ತಕ ಜೋಳಿಗೆ ಬಾಳಿನ ದೀವಿಗೆ ಪಠ್ಯ ಪರಿಕರದ ಕಿಟ್ ವಿತರಣೆ ಮತ್ತು ಸಮುದಾಯದ ಹಿರಿಯ ಸಾಧಕರ ಸಂಸ್ಮರಣಾ ಕಾರ್ಯಕ್ರಮ.

0 0
Read Time:8 Minute, 53 Second

ಕಾರ್ಕಳ: ಕಳೆದ ಹತ್ತು ವರ್ಷಗಳಿಂದ ಸಮುದಾಯ ಸೇವೆಯಲ್ಲಿ ತಮ್ಮನ್ನು ಪರಿಣಾಮಕಾರಿಯಾಗಿ ತೊಡಗಿಸಿ ಕೊಂಡರಿರುವ ಕುಲಾಲ ಚಾವಡಿ ವಾಟ್ಸಪ್ ಬಳಗ ಆರ್ಥಿಕವಾಗಿ ಹಿಂದುಳಿದ ವಿದ್ಯೆಯಲ್ಲಿ ಮುಂದಿರುವ ಗ್ರಾಮೀಣ ಭಾಗದ ಪ್ರಾಥಮಿಕ, ಪ್ರೌಢ, ಪದವಿ ವಿಭಾಗದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಅವಶ್ಯವಿರುವ ಪಠ್ಯ ಸಲಕರಣೆಗಳನ್ನು ವಿತರಿಸಿತು. ಈ ಸಂದರ್ಭದಲ್ಲಿ ತೊಂಬತ್ತರ ದಶಕದ ಮಧ್ಯಂತರದ ಪರ್ವಕಾಲದಲ್ಲಿ ಸಮುದಾಯ ಸಂಘಟನೆಗೆ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡು ಇಹಕಾಯ ತೊರೆದ ಅಮರ ಚೇತನ ದಿ| ಯು. ಸಿ. ಮೂಲ್ಯ ಮತ್ತು ಸಮುದಾಯದ ಮಾಣಿಕ್ಯ ದಿ| ಬಾಲೋಡಿ ಮಹಾಬಲ ಹಾಂಡರ ಸಂಸ್ಮರಣಾ ಕಾರ್ಯಕ್ರಮವೂ ನಡೆಯಿತು.

ನೆರೆದ ಸಭಾಸದರ ಮತ್ತು ವೇದಿಕೆಯೇರಿದ ಗಣ್ಯರ ಸಮಕ್ಷಮದಲ್ಲಿ ಸದೃಢ ಸಮಾಜದ ಭರವಸೆಯ ಭಾವೀ ಜನಾಂಗ, ಯುವ ಪೀಳಿಗೆಯನ್ನು ಮುಂದಿರಿಸಿಕೊಂಡು ಕುಲಾಲ ಚಾವಡಿ, ಸಮುದಾಯ ಮತ್ತು ಸಮಾಜಮುಖಿ ಚಿಂತನೆಯ ಮೂರು ಹೆಜ್ಜೆಗಳ ವಿನೂತನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಿತು.

ಮೊದಲನೆಯದಾಗಿ ಚಾವಡಿಯ ಮೂಲ ದ್ಯೇಯ ಸಮುದಾಯದ ಆಶಕ್ತರು ಮತ್ತು ಅನಾರೋಗ್ಯ ಪೀಡಿತರ ಆರ್ಥಿಕ ನೆರವಿನ ಯೋಜನೆ, ಎರಡನೆಯದಾಗಿ ಆರ್ಥಿಕವಾಗಿ ಹಿಂದುಳಿದು ವಿದ್ಯೆಯಲ್ಲಿ ಮುಂದಿರುವ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಪಠ್ಯ ಸಲಕರಣೆಗಳ ವಿತರಣೆ ಮತ್ತು ಮೂರನೆಯದಾಗಿ ಕುಂಬಾರ ಸಮುದಾಯದ ಉದ್ದಾರಕ್ಕೆ ತಳಮಟ್ಟದ ಹೋರಾಟ ನೀಡಿ ನೇಪಥ್ಯಕ್ಕೆ ಸರಿದು ಇಹಕಾಯ ತೊರೆದ ಹಿರಿಯ ಚೇತನರ ಸಂಸ್ಮರಣಾ ಕಾರ್ಯಕ್ರಮ.

ಈ ಅಭೂತಪೂರ್ವ ಯಶಸ್ವಿ ಕಾರ್ಯಕ್ರಮಕ್ಕೆ ಮತ್ತು ಸದೃಢವಾದ ಕುಲಾಲ ಚಾವಡಿಯ ಸಂಘಟನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಧನ ಬಲ, ಆತ್ಮ ಬಲದ ಬೆಂಬಲ ನೀಡಿದ ಸಮಸ್ತ ಊರ, ಪರವೂರ ಚಾವಡಿ ಬಂಧುಗಳಿಗೆ ಹೃನ್ಮನದ ಕೃತಜ್ಞತೆ ಸಲ್ಲಿಸುತ್ತಾ ಚಾವಡಿ ಕಾರ್ಯಕ್ರಮದ ಪುಟ್ಟ ವರದಿ.

ಕು! ಸಿಂಚನ ಮತ್ತು ತಂಡದವರಿಂದ ವಿಘ್ನೇಶ್ವರನ ಮುಖಸ್ತುತಿಯೊಂದಿಗೆ ಸಮಾರಂಭ ಆರಂಭ ಗೊಂಡಿತು. ತಾಲೂಕು ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮತ್ತು ಕುಲಾಲ ಚಾವಡಿಯ ಸಕ್ರಿಯ ಸದಸ್ಯೆ ಶ್ರೀಮತಿ ವಿನಯಾ ದೇವಪ್ಪ ಕುಲಾಲ್ ಸ್ವಾಗತಿಸಿದರು.
ಚಾವಡಿಯ ಇತಿಹಾಸ, ಮೂಲ ಧ್ಯೇಯ ಮತ್ತು ಮುಂದಿನ ಹೆಜ್ಜೆಗಳ ಬಗ್ಗೆ ಕುಲಾಲ ಚಾವಡಿಯ ಸಹ ನಿರ್ವಾಹಕ ಸುಧೀರ್ ಬಂಗೇರ ಪ್ರಾಸ್ತಾವಿಸಿದರು.

ದಿ| ಯು ಸಿ ಮೂಲ್ಯರ ಸುಪುತ್ರ ಧವಳ ಕೀರ್ತಿ ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯ ಮೇಲಿದ್ದ ಅತಿಥಿ ಗಣ್ಯರ ಜೊತೆಗೂಡಿ ಅಗಲಿದ ಹಿರಿಯ ಚೇತನಗಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸುವ ಮೂಲಕ ಸಂಸ್ಮರಣಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಅನಿವಾರ್ಯ ಕಾರಣದಿಂದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅನುಪಸ್ಥಿತರಿದ್ದ ಶ್ರೀಮತಿ ಸಾವಿತ್ರಿ ಮಹಾಬಲ ಹಾಂಡರಿಗೂ ಚಾವಡಿ ಗೌರವ ಸಲ್ಲಿಸಿತು.

ಯು. ಸಿ. ಮೂಲ್ಯ ಮತ್ತು ಮಹಾಬಲ ಹಾಂಡರ ಪರಿಚಯ ಲೇಖನವನ್ನು ಕುಲಾಲ ಚಾವಡಿಯ ಸಹ ನಿರ್ವಾಹಕ ಸತೀಶ್ ಕಜ್ದೋಡಿ ವಾಚಿಸಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧವಳ ಕೀರ್ತಿ ( ನಿವೃತ್ತ ಉಪನ್ಯಾಸಕರು ಎಸ್, ಎನ್, ಪೊಲಿಟೆಕ್ನಿಕ್ ಮೂಡುಬಿದ್ರಿ) ಇವರು ಸಾಮಾಜಿಕ ಜಾಲ ತಾಣದ ಸದ್ಬಳಕೆಯಿಂದ ಇಂತಹ ಒಂದು ಕಾರ್ಯವನ್ನು ಮಾಡಬಹುದು ಎಂದು ಕುಲಾಲ ಚಾವಡಿ ತೋರಿಸಿ ಕೊಟ್ಟಿದೆ. ಸಮುದಾಯ ಸಂಘಟನೆಗೆ ದುಡಿದು ಅಳಿದ ಹಿರಿಯರ ಸಂಸ್ಮರಣೆಯ ಮೂಲಕ ಒಂದು ಅವಿಸ್ಮರಣೀಯ ಕಾರ್ಯಕ್ಕೆ ನಾಂದಿ ಹಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯ ನಡೆಸಲು ಶಕ್ತಿಯನ್ನು ಆ ಭಗವಂತ ಅನುಗ್ರಹಿಸಲಿ ಎಂದು ಹಾರೈಸಿದರು.

ಶೃಂಗೇರಿಯಿಂದ ಆಗಮಿಸಿದ್ದ ದಿ|ಹಾಂಡರ ನಿಕಟವರ್ತಿ (ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಕ್ಕಮಗಳೂರು ಜಿಲ್ಲಾ ಸೇವಾ ಪ್ರಮುಖ್) ಹೆಚ್. ಟಿ. ಗೋಪಾಲಕೃಷ್ಣ ಅವರು ಹಾಂಡರ ಸಮುದಾಯದ ಪ್ರೀತಿ, ಸಂಘಟನಾ ಚಾತುರ್ಯತೆ, ಮತ್ತು ಅಸಹಾಯಕರ ಮೇಲಿದ್ದ ಮಾತೃ ವಾತ್ಸಲ್ಯ ಭರಿತ ಕಳಕಳಿಯು ತಳಮಟ್ಟದ ಕುಲ ಬಾಂಧವರ ಏಳಿಗೆಯ ಬಗ್ಗೆ ಸದಾ ಕಾಳಜಿಯನ್ನು ತೋರುವಂತೆ ಮಾಡಿತ್ತು. ಬಲಿಷ್ಠವಾದ ಜಾತಿ ಸಂಘಟನೆಯಲ್ಲಿ ಪಳಗಿದ ಯುವಕರು ಮುನ್ನೆಲೆಗೆ ಬಂದರೆ ರಾಜಕೀಯ, ರಾಜಕೀಯೇತರ ವಾಗಿ ಸಮಾಜದಲ್ಲಿ ಎತ್ತರದ ಸ್ಥಾನ ಪಡೆದು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬಹುದು ಎನ್ನುವ ದೂರದೃಷ್ಟಿ ಹೊಂದಿದ್ದ ಹಾಂಡರು ಗ್ರಾಮೀಣ ಭಾಗದಲ್ಲಿ ಜಾತಿ ಸಂಘಟನೆಯಲ್ಲಿ ವಿಶೇಷ ಆಸ್ಥೆ ತೋರಿದ್ದರು. ಪರಿಣಾಮ ಮಲೆನಾಡು ಭಾಗದ ಶೃಂಗೇರಿಯಲ್ಲಿ ಒಂದು ಬಲಿಷ್ಠ ಜಾತಿ ಸಂಘಟನೆ ಜನ್ಮ ತಾಳಿತ್ತು. ಸಂಘಟನೆಯಲ್ಲಿ ಯುವಕರು ಸದಾ ಕ್ರಿಯಾಶೀಲರಾಗಿರಲು ವಾರ್ಷಿಕ ಕಾರ್ಯಕ್ರಮಕ್ಕೆ ಹಲವಾರು ಬಾರಿ ಒಂದಷ್ಟು ದೇಣಿಗೆ ನೀಡಿ ಮಂಗಳೂರು ಭಾಗದಿಂದ ಸಮುದಾಯದ ಗಣ್ಯರನ್ನು ಕರೆತಂದು ಅವರಿಂದ ಸಂಘಟನೆಯ ಅನಿವಾರ್ಯತೆಯ ಬಗ್ಗೆ ಮಾಹಿತಿ ನೀಡಿಸುತಿದ್ದರು. ತೊಂಬತ್ತರ ದಶಕದಲ್ಲಿ ಸಮುದಾಯ ಮಹಾಬಲ ಹಾಂಡರಿಂದ ಬಹಳಷ್ಟು ಪಡೆದಿದೆ, ಹಾಂಡರ ಪ್ರೇರಣೆ ಮತ್ತು ಸಹಕಾರದಿಂದ ಬಲಿಷ್ಠಗೊಂಡ ಸಂಘಟನೆಗಳು ಹಾಂಡರ ಸಮುದಾಯ ಪ್ರೀತಿಯನ್ನು ಮನನ ಮಾಡಿ ಕೊಳ್ಳುವ ಅವಶ್ಯಕತೆ ಇದೆ ಅಂದರು.

ಮಕ್ಕಳಿಗೆ ಪಠ್ಯ ಪರಿಕರದ ವಿತರಿಸಿ ಮಾತನಾಡಿದ ಮುಖ್ಯ ಅತಿಥಿ ಡಾ|| ಆನಂದ್ ಕುಲಾಲ್ ಇವರು(ವಿಜ್ಞಾನಿ ಮತ್ತು ನಿರ್ದೇಶಕರು, ಪೂರ್ಣ ಪ್ರಜ್ಞಾ ವೈಜ್ಞಾನಿಕ ಸಂಶೋಧನಾ ಕೇಂದ್ರ ಬೆಂಗಳೂರು) ಶೂನ್ಯದಿಂದ ಅಧ್ಭುತ ಸೃಷ್ಟಿಸಿದ ಹೆಚ್ಚಿನ ಸಾಧಕರು ಕಡು ಬಡತನದಿಂದ ಬಂದವರು. ಆದ್ದರಿಂದ ವಿದ್ಯೆಗೆ ಬಡತನ, ಸಿರಿತನದ ಹಂಗಿಲ್ಲ. ನಾವು ಅಂಜಿಕೆ, ಅಳುಕು, ಕೀಳರಿಮೆಯನ್ನು ತೊರೆದು ಆತ್ಮಸ್ಥೈರ್ಯದಿಂದ ಮುನ್ನುಗ್ಗಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಇಂದಿನ ಫಾಸ್ಟ್ ಫುಡ್ ಯುಗದಲ್ಲಿ ನಮ್ಮ ಜೀವನ ಶೈಲಿಯಲ್ಲಿ ಶಿಸ್ತು ತೀರಾ ಅತ್ಯಗತ್ಯ. ಜೀವನದ ಗುರಿ ತಲುಪಲು ಸಮಯ ಪಾಲನೆ ಮತ್ತು ಸಧೃಡ ಆರೋಗ್ಯಕ್ಕೆ ತಿನ್ನುವ ಆಹಾರದ ಬಗ್ಗೆಯೂ ಕಾಳಜಿ ವಹಿಸಿಕೊಳ್ಳಬೇಕು ಅಂದರು.

‌‌ವಿಶೇಷ ಉಪನ್ಯಾಸ ನೀಡಿದ ಅದಮಾರು ಪೂರ್ಣ ಪ್ರಜ್ಞಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ದೇವಿ ಪ್ರಸಾದ್ ಬೆಳ್ಳಿ ಬೆಟ್ಟು ಇವರು ಕುಲಾಲ ಚಾವಡಿಯ ಪುಸ್ತಕ ಜೋಳಿಗೆ ಬಾಳಿನ ದೀವಿಗೆ ಕಾರ್ಯಕ್ರಮದ ತಲೆ ಬರಹವೇ ನನ್ನನ್ನು ಬಹುವಾಗಿ ಸೆಳೆಯಿತು. ಇದೊಂದು ಅರ್ಥ ಪೂರ್ಣ ಕಾರ್ಯಕ್ರಮ. ಬರೆದು ಬದುಕು ಇಲ್ಲವೇ ಬರೆಯುವಂತೆ ಬದುಕು ಅನ್ನುವಂತೆ ಇಂದು ಯಾರ ಸಂಸ್ಮರಣೆಯೊಂದಿಗೆ ಈ ಕಾರ್ಯಕ್ರಮ ಪ್ರಾರಂಭವಾಯಿತೋ ಹಾಗೆಯೇ ನಮ್ಮ ಬದುಕಿನ ಸಾಧನೆ ಮುಂದಿನ ಪೀಳಿಗೆ ಸ್ಮರಿಸುವಂತೆ ಇರಬೇಕು ಎಂದು ಮಕ್ಕಳನ್ನು ಹುರಿದುಂಬಿಸಿದರು.

ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಚಾವಡಿಯ ಪ್ರಧಾನ ಕಾರ್ಯ ನಿರ್ವಾಹಕ ಸಂತೋಷ್ ಕುಲಾಲ್ ರವರು ಚಾವಡಿಯ ಸುಧೀರ್ಘ ಪಯಣದ ಮೊದಲ ಹೆಜ್ಜೆಗೆ ಪ್ರೇರಣೆ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿ, ಸಮುದಾಯ ಸೇವೆ, ಪಠ್ಯ ಪರಿಕರ ವಿತರಣೆ, ಹಿರಿಯ ಸಾಧಕರ ಸಂಸ್ಮರಣೆಯ ತನಕ ಸಾಗಿ ಬಂದ ಚಾವಡಿಯ ಸಮಾಜ ಮುಖಿ ಸತ್ಕಾರ್ಯಗಳು ನಿರಂತರ ಸಾಗುತ್ತದೆ ಎನ್ನುವ ಅಶ್ವಾಸನೆ ನೀಡಿ ಸಮಸ್ತ ಕುಲಾಲ ಚಾವಡಿಯ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪಠ್ಯ ಪರಿಕರ ವಿತರಣೆಯ ಕಾರ್ಯಕ್ರಮವನ್ನು ಶ್ರೀ ಮತಿ ಶಾಲಿನಿ ಸಂತೋಷ್ ಕುಲಾಲ್ ನಿರ್ವಹಿಸಿದರೆ, ಕು| ಸಮೀಕ್ಷಾ ಕುಲಾಲ್ ಧನ್ಯವಾದ ಗೈದರು.

ಕು| ಮನಸ್ವಿ ಕುಲಾಲ್ ಮತ್ತು ಕು| ದೀಕ್ಷಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ವರದಿ :- ಸತೀಶ್ ಕಜ್ದೋಡಿ ಮಾಳ

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *