
ಕುಲಾಲ ಸಂಘ ನಾನಿಲ್ತಾರ್ ಇದರ 37 ನೇ ವಾರ್ಷಿಕ ಮಹಾಸಭೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ನಾನಿಲ್ತಾರ್ ಕುಲಾಲ ಸಮುದಾಯ ಭವನದಲ್ಲಿ ಶ್ರೀ ಜಯರಾಮ್ ಕುಲಾಲ್ ಅಧ್ಯಕ್ಷರು ಕುಲಾಲ ಸಂಘ ನಾನಿಲ್ತಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.



ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.

ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಸಮಾಜದಲ್ಲಿರುವ ಅಶಕ್ತರಿಗೆ ಧನಸಹಾಯವನ್ನು ಮಾಡಲಾಯಿತು..


ಶ್ರೀ ಪ್ರೇಮಾನಂದ ಕುಲಾಲ್ ಮಾತಾಡಿ ಸಮುದಾಯದ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ವೀರನಾರಾಯಣ ದೇವಸ್ಥಾನದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.. ಮತ್ತು ನಾನಿಲ್ತಾರ್ ಕುಲಾಲ ಸಂಘದ ಕೊಡುಗೆಯನ್ನು ಶ್ಲಾಘಿಸಿದರು…

ಶ್ರೀ ಅನಿಲ್ ದಾಸ್ ಅವರು ಮಾತನಾಡಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತಿಗಾಗಿ ನಾಯಕರುಗಳು ಸ್ವಾರ್ಥ ಬಿಟ್ಟು ಎಲ್ಲರನ್ನ ಒಗ್ಗೂಡಿಸುವ ಕಾರ್ಯ ಮಾಡಬೇಕು. ನಾಯಕರ ಅವಶ್ಯಕತೆಯನ್ನು ಮನಗಂಡು ಶ್ರೀ ಕುಶ ಮೂಲ್ಯ ಮತ್ತು ಶ್ರೀ ಜಯರಾಮ್ ಕುಲಾಲ್ ಹಾಗೂ ಶ್ರೀ ಪ್ರೇಮಾನಂದ ಕುಲಾಲ್ ಮುಂತಾದವರ ನಾಯಕತ್ವವನ್ನು ಮುಕ್ತ ಕಂಠದಿಂದ ಪ್ರಶಂಸಿದರು.. ಹಾಗೂ ಮುಂದಿನ ದಿನಗಳಲ್ಲಿ ಯುವಕರು ಯುವ ಶಕ್ತಿ ಸಮಾಜದೊಂದಿಗೆ ಸಂಘಟನಾತ್ಮಕವಾಗಿ ಕೈಜೋಡಿಸಬೇಕೆಂದು ಕರೆ ನೀಡಿದರು.
ಕುಶ ಮೂಲ್ಯರವರು ಕುಂಭ ನಿಧಿ ಸಹಕಾರಿ ಗೆ ಕುಲಾಲ ಸಮಾಜದ ಹೆಚ್ಚಿನ ರೀತಿಯ ಸಹಕಾರವನ್ನು ಬಯಸಿದರು..
ಶ್ರೀಯುತ ಶ್ರೀಕಾಂತ್ ಕುಲಾಲ್ ಶಿಕ್ಷಕರು ಕಾರ್ಕಳ ಕಾರ್ಯಕ್ರಮವನ್ನು ನಿರೂಪಿಸಿದರು..ಶ್ರೀಮತಿ ಅರುಣಾ ಧನ್ಯವಾದ ಸಮರ್ಪಿಸಿದರು ಬಳಿಕ ಸಭಾ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ. ಮುಕ್ತಾಯವಾಯಿತು..
ಮುಖ್ಯ ಅತಿಥಿಗಳಾಗಿ ಶ್ರೀ ಪ್ರೇಮಾನಂದ ಕುಲಾಲ್, ಶ್ರೀ ವೀರ ನಾರಾಯಣ ದೇವಸ್ಥಾನ ಟ್ರಸ್ಟ್ ಇದರ ಅಧ್ಯಕ್ಷರು. ಶ್ರೀ ಲಯನ್ ಅನಿಲ್ ದಾಸ್ ಅಧ್ಯಕ್ಷರು ಕುಲಾಲ ಕುಂಬಾರ ಯುವ ವೇದಿಕೆ ದಕ್ಷಿಣ ಜಿಲ್ಲೆ, ಶ್ರೀ ಹರಿಶ್ಚಂದ್ರ ಕುಲಾಲ್ ಅಧ್ಯಕ್ಷರು ಕಾರ್ಕಳ ಕುಲಾಲ ಸುಧಾರಕ ಸಂಘ, ಶ್ರೀ ಪ್ರಶಾಂತ್ ಕುಲಾಲ್ ಗ್ರಾಮ ಆಡಳಿತ ಅಧಿಕಾರಿ ಮಂಡ್ಯ , ಶ್ರೀ ಕಾಳು ಕುಲಾಲ್ ಅಧ್ಯಕ್ಷರು ಪೆರ್ಡೂರ್ ಕುಲಾಲ ಸಂಘ ಮತ್ತು ಮತ್ತಿತರರು ಉಪಸ್ಥಿತರಿದ್ದರು..