
ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಮೂಲ್ಯರ ಕೆಸರದ ಗೊಬ್ಬು ಕಾರ್ಯಕ್ರಮವನ್ನು ನಿವೃತ್ತ ಡೆಪ್ಯುಟಿ ಕಮಾಂಡರ್ ಶ್ರೀ ಚಂದಪ್ಪ ಕುಲಾಲ್ ದೀಪ ಬೆಳಗಿಸಿ ಉದ್ಘಾಟಿಸಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶೇಷಪ್ಪ ಕುಲಾಲ (ಪುತ್ತೂರು ಕುಲಾಲ ಸೇವಾ ಸಂಘದ ಅಧ್ಯಕ್ಷರು) ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಲಯನ್ ಅನಿಲ್ ದಾಸ್. ಜಿಲ್ಲಾಧ್ಯಕ್ಷರು( ಕುಲಾಲ ಕುಂಬಾರರ ಯುವ ವೇದಿಕೆ ) ಮತ್ತು ಶ್ರೀ ಕಿರಣ್ ಅಟ್ಲೂರು (ಕುಲಶೇಖರ ವೀರನಾರಾಯಣ ಕ್ಷೇತ್ರ ದ.ಸೇವಾ ಸಮಿತಿ ಅಧ್ಯಕ್ಷರು )ಮತ್ತು ಪುತ್ತೂರು ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ನವೀನ್ ಕುಲಾಲ್ ಪುತ್ತೂರು ಮತ್ತು ಕ್ರೀಡಾ ಕಾರ್ಯದರ್ಶಿ ಶ್ರೀ ಹರೀಶ್ ಕಾರ್ಯದರ್ಶಿ ರವಿ ಮತ್ತು ನಿರೂಪಕರಾಗಿ ಯತೀಶ್ ಕುಲಾಲ್ ಹಾಗೂ ಈ ಕ್ರೀಡಾಕೂಟಕ್ಕೆ ಗದ್ದೆಯನ್ನು ಒದಗಿಸಿಕೊಟ್ಟ ಅಪ್ಪಿ ಮೂಲ್ಯದಿ.ಇವರನ್ನು ಸನ್ಮಾನಿಸಲಾಯಿತು.

ತೇಜ್ ಕುಮಾರ್ ಅವರು ಧನ್ಯವಾದ ಸಮರ್ಪಿಸಿದರು. ಕುಲಾಲ ಪುಟಾಣಿ ಮಕ್ಕಳು ಹಿರಿಯರು ಸಮೇತ ಕೆಸರು ಗದ್ದೆಯಲ್ಲಿ ಸಾರ್ಥ ವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಸಂದೇಶ ರವಾನಿಸಿದರು. ಮತ್ತು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.


ಶ್ರೀ ಮಹೇಶ್ ಕುಲಾಲ್ ಕಡೆಶಾಲ್ಯವ್ಯ ರವರು ವಿಶೇಷ ವೀಕ್ಷಕರ ವಿವರಣೆ ಗೈದರು. ಇಂತಹ ಕಾರ್ಯಕ್ರಮ ಗಳು ಜಿಲ್ಲೆ ಯಲ್ಲಿ ಕೂಡ ನಿರಂತರ ನಡೆಯಲಿ ಎಂದು ಎಲ್ಲರೂ ಮನ ತುಂಬಿ ಶುಭ ಹಾರೈಸಿದರು.
