
Read Time:1 Minute, 6 Second
ಬೆಳ್ತಂಗಡಿಯಲ್ಲಿ ಹೃದಯಾಘಾತಕ್ಕೆ ಬೆಳ್ತಂಗಡಿಯಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಆರೋಗ್ಯವಾಗಿದ್ದ ವ್ಯಕ್ತಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಹೋದಾಗ ಸಾವನ್ನಪ್ಪಿದ್ದಾರೆ.


ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆ ಗಂಪದಕೋಡಿ ನಿವಾಸಿ ವಜ್ರಾಕ್ಷ ಪೂಜಾರಿ(53) ಎಂಬವರಿಗೆ ಜೂ.30 ರಂದು ರಾತ್ರಿ ಎದೆನೋವು ಕಾಣಿಸಿದೆ ಬಳಿಕ ತನ್ನ ಸ್ಕೂಟರ್ ನಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮುಂದಾದಾಗ ಸಾವನ್ನಪ್ಪಿದ್ದಾರೆ.
ವಜ್ರಾಕ್ಷ ಪೂಜಾರಿ ಆರೋಗ್ಯವಾಗಿದ್ದು ದಿನನಿತ್ಯದಂತೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದಾಗ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

