ಶೀಘ್ರದಲ್ಲಿ ಪುತ್ತೂರು – ಮಂಗಳೂರು ನಡುವೆ ನಾನ್ ಸ್ಟಾಪ್ KSRTC ಬಸ್

0 0
Read Time:1 Minute, 39 Second

ಪುತ್ತೂರು: ಶೀಘ್ರದಲ್ಲಿ ಪುತ್ತೂರು ಮಂಗಳೂರು ನಡುವೆ ನಾನ್ ಸ್ಟಾಪ್ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಲಿದೆ.

ಶಾಸಕ ಅಶೋಕ್‌ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಪುತ್ತೂರಿನಿಂದ ನೇರವಾಗಿ ಮಂಗಳೂರಿಗೆ ತೆರಳುವ ಮತ್ತು ಮಂಗಳೂರಿನಿಂದ ನೇರವಾಗಿ ಪುತ್ತೂರಿಗೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಪುತ್ತೂರು – ಸ್ಟೇಟ್‌ಬ್ಯಾಂಕ್‌ ನಾನ್‌ಸ್ಟಾಪ್‌ ಬಸ್‌ಗಳನ್ನು ಶೀಘ್ರದಲ್ಲೇ ಸಂಚಾರ ಆರಂಭಿಸಿವೆ. ಆರಂಭದಲ್ಲಿ 6 ಬಸ್‌ಗಳು ಈ ಸೇವೆಗೆ ಲಭ್ಯವಾಗಲಿವೆ. ಇವು ಪುತ್ತೂರು ಬಿಟ್ಟ ಬಳಿಕ ಮಂಗಳೂರಿನಲ್ಲಿ ಮಾತ್ರ ನಿಲ್ಲಲಿದೆ. ಇದರಿಂದ ಒಂದು ಗಂಟೆಯಲ್ಲಿ ಮಂಗಳೂರು ತಲುಪಲು ಸಾಧ್ಯ ಎನ್ನಲಾಗಿದೆ.

ಮಂಗಳೂರಿನಿಂದ ಬಂಟ್ವಾಳ- ಕಲ್ಲಡ್ಕ- ವಿಟ್ಲ- ಪುತ್ತೂರು -ಉಪ್ಪಿನಂಗಡಿ ಮಾರ್ಗವಾಗಿ ಬೆಂಗಳೂರಿಗೆ ಅಂಬಾರಿ ಉತ್ಸವ ಹವಾ ನಿಯಂತ್ರಿತ ಬಸ್‌ ಸಂಚಾರ ನಡೆಸಲಿದೆ. ವಿಟ್ಲ ಭಾಗದ ಪ್ರಯಾಣಿಕರ ಬೇಡಿಕೆಯಂತೆ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಸಭೆಯಲ್ಲಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಆಮಲಿಂಗಯ್ಯ ಹೊಸ ಪೂಜಾರಿ, ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಜೈಶಾಂತ್‌, ಡಿಪೋ ಮ್ಯಾನೆಜರ್‌ ಸುಬ್ರಹ್ಮಣ್ಯ ಪ್ರಸಾದ ಉಪಸ್ಥಿತರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *