
Read Time:1 Minute, 13 Second
ಉಡುಪಿ: ಎರಡನೇ ಮದುವೆಯಾಗಿ ದುಬೈಗೆ ತೆರಳಿದ ಪತಿಯೋರ್ವ ಮೊದಲನೇ ಪತ್ನಿಗೆ ಮೊಬೈಲ್ ಕರೆಯಲ್ಲೇ ತಲಾಖ್ ನೀಡಿದ್ದು ಆತನ ವಿರುದ್ಧ ನೊಂದ ಮಹಿಳೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಲಾಗಿದೆ.


ಮಂಗಳೂರಿನ ಅಮ್ರಿನ್ ಎಂಬ ಮಹಿಳೆ ಉಡುಪಿಯ ಆದಿಲ್ ಇಬ್ರಾಹಿಂ ಅವರನ್ನು ೨೦೧೩ರಲ್ಲಿ ಮದುವೆಯಾಗಿದ್ದರು. ವರದಕ್ಷಿಣೆಯಾಗಿ ಅರ್ವತ್ತು ಪವನ್ ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳನ್ನು ನೀಡಲಾಗಿತ್ತು. ದಂಪತಿ ಬ್ರಹ್ಮಾವರ ಆಕಾಶವಾಣಿ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಆನಂತರವೂ ಚಿನ್ನ, ನಗದಿಗಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ಮಹಿಳೆ ಆರೋಪಿಸಿದ್ದಾರೆ. ಈ ಮಧ್ಯೆ ಇದೇ ವರ್ಷ ಜನವರಿಯಲ್ಲಿ ಆದಿಲ್ ಮತ್ತೊಂದು ಮದ್ವೆಯಾಗಿದ್ದು ಈ ವಿಚಾರವನ್ನು ಅವರಲ್ಲಿ ಕೇಳಿದಾಗ ಹೌದು ಮದುವೆಯಾಗಿದ್ದೇನೆ. ನಿನಗೆ ತಲಾಖ್ ನೀಡುವುದಾಗಿ ಹೇಳಿ ಮೂರು ಬಾರಿ ತಲಾಕ್ ಎಂದು ಉಚ್ಛರಿಸಿದ್ದಾನೆ ಎಂದು ಅಮ್ರಿನ್ ದೂರಿನಲ್ಲಿ ತಿಳಿಸಿದ್ದಾರೆ.


