
ಕರ್ನಾಟಕ ರಾಜ್ಯ ಕುಲಾಲರ /ಕುಂಬಾರರ ಯುವ ವೇದಿಕೆಗಳ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ ರಿ. ಮಂಗಳೂರು ಇದರ ರಾಜ್ಯ, ವಿಭಾಗ, ಜಿಲ್ಲೆ ಹಾಗೂ ವಿಧಾನಸಭಾ/ ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಆಯ್ಕೆ ಪ್ರಕ್ರಿಯೆಗೆ ಚಾಲನೆ ಕೊಡುವಂತೆ ರಾಜ್ಯ, ವಿಭಾಗ ಹಾಗೂ ಜಿಲ್ಲಾ ನಾಯಕರುಗಳಿಗೆ ನೋಂದಾಯಿತ ಕೇಂದ್ರಸಮಿತಿಯಿಂದ ಅಧಿಕಾರ ಹಸ್ತಾಂತರ


15 ವರ್ಷಗಳ ಸೇವೆ ಸಲ್ಲಿಸಿದ ಬಳಿಕ ನೊಂದಾವಣೆ ಗೊಂಡು, 15 ವರ್ಷಗಳಲ್ಲಿ ಮಾಡಿದ ಸಮಾಜ ಮುಖೀ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಮುದಾಯದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದ ಸಂಸ್ಥೆಗೆ ನೂತನ ನಿಯೋಜಿತ ರಾಜ್ಯ ಅಧ್ಯಕ್ಷರಾಗಿ ಸುಧಾಕರ್ ಸಾಲ್ಯಾನ್, ನಿಯೋಜಿತ ರಾಜ್ಯ ಕಾರ್ಯದರ್ಶಿ ಯಾಗಿ ಸತೀಶ್ ಕುಲಾಲ್ ನಡೂರು, ನಿಯೋಜಿತ ರಾಜ್ಯ ಉಪಾಧ್ಯಕ್ಷರಾಗಿ ಹರೀಶ್ ಕಾರಿಂಜ, ಜಯೇಶ್ ಗೋವಿಂದ, ಸಂತೋಷ್ ಕುಲಾಲ್ ಪೆರ್ಡೂರು, ಮಾಧವ ಕುಲಾಲ್ ಬಿ ಸಿ ರೋಡ್, ಆರಿಸಿ ಉಳಿದ ರಾಜ್ಯ ಸಮಿತಿಯನ್ನ ವಿಭಾಗ ಅಧ್ಯಕ್ಷರುಗಳು ಜಿಲ್ಲಾ ಅಧ್ಯಕ್ಷರುಗಳು ಹಾಗು ಉಸ್ತುವಾರಿಗಳಜೊತೆ ಸಮಾಲೋಚಿಸಿ ಆರಿಸಿ ಕೊಳ್ಳಲು ಸೂಚಿಸಲಾಯಿತು. ಜೊತೆಗೆ ಕಾಸರಗೋಡು, ಬೆಂಗಳೂರು, ಮೈಸೂರು, ಮಲೆನಾಡು, ಬೆಳಗಾಂ, ಮುಂಬೈ ಜೊತೆ ಗಡಿನಾಡು ಮತ್ತು ಹೊರನಾಡು ವಿಭಾಗದ ನಾಯಕರುಗಳ ಜೊತೆ ಚರ್ಚಿಸಿ ಅಲ್ಲಿಯ ಪದಾಧಿಕಾರಿಗಳ ಆಯ್ಕೆ ಮಾಡುವಂತೆ ತೀರ್ಮಾನ ಮಾಡಲಾಯಿತು.
ಕರಾವಳಿ ವಿಭಾಗೀಯ ನಿಯೋಜಿತ ಅಧ್ಯಕ್ಷರನ್ನಾಗಿ ಸುಕುಮಾರ್ ಬಂಟ್ವಾಳ ಹಾಗು ನಿಯೋಜಿತ ಕಾರ್ಯದರ್ಶಿಯನ್ನಾಗಿ ಸುರೇಂದ್ರ ಕುಲಾಲ್ ವರಂಗ ಹೆಬ್ರಿ ಅವರನ್ನ ಆರಿಸಿ, ಆ ವಿಭಾಗಕ್ಕೆ ಮಾರ್ಗದರ್ಶಿ ಉಸ್ತುವಾರಿಗಳನ್ನಾಗಿ ಅಶೋಕ್ ಕುಲಾಲ್ ಕೂಳೂರು, ಜಯಂತ ಸಂಕೋಲಿಗೆ, ಶೇಷಪ್ಪ ಮಾಸ್ತರ್, ಪದ್ಮ ಕುಮಾರ್ ಬೆಳ್ತಂಗಡಿ, ಭೋಜ ಅಡ್ಯಾರ್ , ಭೋಜಕುಲಾಲ್ ಬೆಳಂಜೆ ಕಾರ್ಕಳ, ಮಹಾಬಲ ಮಾಸ್ತರ್, ದಿನಕರ ಅಂಚನ್, ಸತೀಶ್ ಕಡಿಯಾಳಿ, ಪ್ರಭಾಕರ್ ಕುಲಾಲ್ ಕುಂದಾಪುರ, ರಾಜೇಂದ್ರ ಕುಲಾಲ್ ಅಳಪೆ, ಹೊನ್ನಯ್ಯ ಕಾಟಿಪಳ್ಳ, ಜನಾರ್ಧನ ಸಾಲ್ಯಾನ್ ಕುಳಾಯಿ, ಗಂಗಾದರ ಕೆ, ಕುಳಾಯಿ, ಶಂಕರ ಕುಲಾಲ್ ಪಾರಂಪಳ್ಳಿ, ರಾಜೀವ ಕುಲಾಲ್ ಬ್ರಹ್ಮಾವರ , ಬಸವರಾಜ್ ಕುಲಾಲ ಬ್ರಹ್ಮಾವರ , ವಿಶ್ವನಾಥ್ ಕುಲಾಲ್ ಬಿದ್ಕಲ್ ಕಟ್ಟೆ, ಗೋವಿಂದ ಕುಲಾಲ್ ಹೆಂಗುವಳ್ಳಿ ಇವರನ್ನ ಆರಿಸಲಾಯಿತು. ಇವರುಗಳ ಉಸ್ತುವಾರಿಯಲ್ಲಿ ನೊಂದಾಯಿತ ಕೇಂದ್ರ ಸಮಿತಿಯಲ್ಲಿ ಇರುವ ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ರತ್ನಾವತಿ ಎಂ ಆರ್, ಶ್ರೀಮತಿ ಸಾವಿತ್ರಿ ಮಹಾಬಲ ಹಂಡ, ಶ್ರೀಮತಿ ಬಬಿತಾ ಕುಲಾಲ್, ಶ್ರೀಮತಿ ಮಮತಾ ಕುಲಾಲ್, ಶ್ರೀಮತಿ ಭಾರತಿ ಟೀಚರ್, ಶ್ರೀಮತಿ ವೇದಾವತಿ ಕುಲಾಲ್ ನಾವೂರು, ಶ್ರೀಮತಿ ರೇಖಾ ಪ್ರಭಾಕರ ಕುಲಾಲ್, ಶ್ರೀಮತಿ ವಿಮಲಾ ಕುಲಾಲ್ ಸಹಕಾರದೊಂದಿಗೆ ಕೇಂದ್ರ ಮಹಿಳಾ ಸಮಿತಿಯನ್ನ ಆರಿಸುವಂತೆ ತೀರ್ಮಾನಿಸಲಾಯಿತು.
ದಕ ಜಿಲ್ಲಾ ನೂತನ ನಿಯೋಜಿತ ಅಧ್ಯಕ್ಷರನ್ನಾಗಿ ಅನಿಲ್ ದಾಸ್ ಹಾಗೂ ನಿಯೋಜಿತ ಕಾರ್ಯದರ್ಶಿ ಯನ್ನಾಗಿ ನವೀನ್ ಕುಲಾಲ್ ಮಜಾಲ್, ನಿಯೋಜಿತ ಉಪಾಧ್ಯಕ್ಷರನ್ನಾಗಿ ಗಣೇಶ್ ಕುಲಾಲ್ ಕುಳಾಯಿ, ಹಾಗೂ ಜಯಗಣೇಶ್ ಕುಲಾಲ್ ಬಂಟ್ವಾಳ ಇವರನ್ನ ಆರಿಸಲಾಯಿತು. ಉಳಿದ ಪದಾಧಿಕಾರಿಗಳನ್ನ ಸೇವಾ ಆದ್ಯತೆಯ ಮೇರೆಗೆ ಆರಿಸಿಕೊಳ್ಳಲು ತೀರ್ಮಾನಿಸಲಾಯಿತು.


ಉಡುಪಿ ಜಿಲ್ಲಾ ನಿಯೋಜಿತ ಅಧ್ಯಕ್ಷರನ್ನಾಗಿ ಮಂಜುನಾಥ್ ಕುಲಾಲ್ ಜನ್ಸಾಲೆ ಹಾಗೂ ನಿಯೋಜಿತ ಕಾರ್ಯದರ್ಶಿಯನ್ನಾಗಿ ಶಂಕರ ಕುಲಾಲ್ ಮೊಳಹಳ್ಳಿ ಯವರ ಆರಿಸಲಾಗಿದ್ದು, ನಿಯೋಜಿತ ಉಪಾಧ್ಯಕ್ಷರನ್ನಾಗಿ ರವೀಂದ್ರ ಕುಲಾಲ ಚೇರ್ಕಾಡಿ , ರಮೇಶ್ ಕುಲಾಲ ಹೆಂಗವಳ್ಳಿ ಅರಿಸಿ ಉಳಿದ ಪದಾಧಿಕಾರಿಗಳನ್ನ ಸೇವಾ ಆದ್ಯತೆಯ ಮೇರೆಗೆ ಆರಿಸಿ ಕೊಳ್ಳಲು ತೀರ್ಮಾನಿಸಲಾಯಿತು.

ಕಾನೂನು ಸಲಹೆಗಾರರನ್ನಾಗಿ ನ್ಯಾಯವಾದಿ ರಾಮ್ ಪ್ರಸಾದ್ ಅವರನ್ನೇ ಮುಂದುವರಿಸಲು ತೀರ್ಮಾನಿಸಲಾಯಿತು. ಸಂಸ್ಥೆ ನೊಂದವಣೆ ಗೊಂಡಿದ್ದು ಖಾತೆ ಹಾಗೂ ಪಾನ್ ಕಾರ್ಡ್ ಹೊಂದಿರುವುದರಿಂದ ಎಲ್ಲಾ ಘಟಕಗಳಲ್ಲೂ ಸೇರಿ ಕನಿಷ್ಠ 5000 ಮಂದಿಯನ್ನ ಸದಸ್ಯತನ ಮಾಡಲು ತೀರ್ಮಾನ ಮಾಡಲಾಯಿತು.
ಆಯ್ಕೆಯ ಪ್ರಕ್ರಿಯೆಗಳನ್ನ ಸ್ಥಾಪಕ ಅಧ್ಯಕ್ಷರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ನಿರ್ಗಮನ ರಾಜ್ಯ ಅಧ್ಯಕ್ಷರಾದ ಗಂಗಾಧರ ಬಂಜನ್, ನಿರ್ಗಮನ ಕಾರ್ಯದರ್ಶಿಯಾದ ಜಯೇಶ್ ಗೋವಿಂದ ಉಳಿದ ಪದಾಧಿಕಾರಿಗಳ ಹಾಗು ಹಿರಿಯರ ಜೊತೆ ಚರ್ಚಿಸಿ ಜಂಟಿಯಾಗಿ ನಡೆಸಿಕೊಟ್ಟು, ರಾಜ್ಯ ಹಾಗು ಜಿಲ್ಲಾ ಪದಗ್ರಹಣ ಸಮಾರಂಭ ಮಾಡುವರೇ ಮಾರ್ಗದರ್ಶನ ನೀಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಲಾಯಿತು.