ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ 36 ಮಂದಿ ವಿರುದ್ಧ ಗಡಿಪಾರು ಪ್ರಕ್ರಿಯೆ ಆರಂಭ

0 0
Read Time:1 Minute, 37 Second

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯ ವ್ಯಾಪ್ತಿಯಲ್ಲಿ 36 ಮಂದಿ ರೌಡಿಶೀಟರ್ ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗೆ ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ್ಲ, ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ, ಬಂಟ್ವಾಳದ ಭರತ್ ಕುಮ್ಡೇಲ್ ಸೇರಿ 36 ಮಂದಿ ಲಿಸ್ಟ್ ನಲ್ಲಿದ್ದಾರೆ.ಬಂಟ್ವಾಳ ನಗರ ವ್ಯಾಪ್ತಿಯಿಂದ 4 ಮಂದಿ, ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯಿಂದ 6 ಮಂದಿ, ಬೆಳ್ತಂಗಡಿ ವ್ಯಾಪ್ತಿಯಿಂದ  2 ಮಂದಿ, ಪುಂಜಾಲಕಟ್ಟೆ ವ್ಯಾಪ್ತಿಯಿಂದ ಒರ್ವ, ಪುತ್ತೂರು ನಗರ ವ್ಯಾಪ್ತಿಯಿಂದ 6 ಮಂದಿ , ಪುತ್ತೂರು ಗ್ರಾಮಾಂತರ ವ್ಯಾಪ್ತಿಯಿಂದ 3 ಮಂದಿ, ಕಡಬ ವ್ಯಾಪ್ತಿಯಿಂದ ಓರ್ವ, ಉಪ್ಪಿನಂಗಡಿ ವ್ಯಾಪ್ತಿಯಿಂದ 6 ಮಂದಿ, ಸುಳ್ಯ ವ್ಯಾಪ್ತಿಯಿಂದ 2 ಮಂದಿ, ಬೆಳ್ಳಾರೆ ವ್ಯಾಪ್ತಿಯಿಂದ 2 ಮಂದಿ ಸೇರಿ ಒಟ್ಟು 36 ಮಂದಿ ರೌಡಿ ಶೀಟರ್ ಗಳನ್ನು ಗಡಿಪಾರು ಮಾಡುವ ಕಾನೂನು ಪ್ರಕ್ರಿಯೆಯ ಪಟ್ಟಿಯನ್ನು ಮಾಡಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *