
Read Time:46 Second
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಉಪ್ಪಳ ಗೇಟ್ ಬಳಿ ಇಂದು ಸಂಜೆ ಮೀನಿನ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ವರ್ಕಡಿ ಸಮೀಪದ ಕೋಳ್ಯೂರು ಪದವು ನಿವಾಸಿ ಮಹಿಳೆ ನವ್ಯ ಮೃತಪಟ್ಟಿದ್ದಾರೆ.


ಪತಿ ಪದ್ಮನಾಭ (36) ಹಾಗೂ ಮಗು ಗಾಯನ್ (2)ಗಂಭೀರ ಗಾಯಗೊಂಡಿದ್ದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ನವ್ಯಾ.ಕೆ (24) ಅವರು ತಲಪಾಡಿ ಗ್ಯಾರೇಜಿನ ಶಿವರಾಮ ಆಚಾರ್ಯ ಅವರ ಪುತ್ರಿಯಾಗಿದ್ದು ಇಂದು ಔಷಧಿ ಗೆಂದು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

