
ಕುಲಾಲ ಸಂಘ ಕೊಲ್ಯ ಇದರ 60 ನೇ ವಾರ್ಷಿಕೋತ್ಸವವು, ಕೊಲ್ಯ ಕುಲಾಲ ಸಮುದಾಯ ಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು. ಶ್ರೀ ಭಾಸ್ಕರ್ ಕುತ್ತಾರ್ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀ ದಯಾನಂದ ಪಿ ಎಸ್.( ಟ್ರಸ್ಟಿ ಶ್ರೀ ವೀರ ನಾರಾಯಣ ದೇವಸ್ಥಾನ.ಕುಲಶೇಖರ) ಇವರು ಮಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ. ಪೃಥ್ವಿರಾಜ್. ಗುರುಪುರ.(k. P. C. C. ಸದಸ್ಯರು.) ಶ್ರೀ ಗಂಗಾಧರ್ ಬಂಜನ್.(ರಾಜ್ಯಾಧ್ಯಕ್ಷರು ಕುಲಾಲ ಯುವ ವೇದಿಕೆ) ಶ್ರೀ ಅಶೋಕ್ ಕುಲಾಲ್.. (ಸರಕಾರದ ಪ್ರತಿನಿಧಿ ನಿರ್ದೇಶಕರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಕುಳಾಯಿ ) ಡಾ!.ಚಂದನ .( ಪ್ರೊಫೆಸರ್. ಸಹ್ಯಾದ್ರಿ ಕಾಲೇಜ್ ಅಡ್ಯಾರ್) ಶ್ರೀ ಸುಲೋಚನ ಟೀಚರ್ ಹಾಗೂ ಕೊಲ್ಯ ಕುಲಾಲ ಸಂಘದ ಆಡಳಿತ ಸಮಿತಿ ಸದಸ್ಯರು ಮತ್ತು ಮಹಿಳಾ ಮಂಡಳಿಯ ಅಧ್ಯಕ್ಷರು ಸದಸ್ಯರು. ಹಾಗೂ ಸಮಾಜದ ಬಾಂಧವರು ಹಿರಿಯರು ಮಕ್ಕಳು ಪಾಲ್ಗೊಂಡಿದ್ದರು.



ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಾಂಸ್ಕೃತಿ ಕಾರ್ಯಕ್ರಮ ಎಲ್ಲರ ಮನಸ್ಸು ಸೂರೆಗೊಂಡಿತು. ಈ ಕಾರ್ಯಕ್ರಮದಲ್ಲಿ ಶ್ರೀ ಪ್ರೇಮಾನಂದ ಕುಲಾಲ್ ಕೋಡಿಕಲ್, ಶ್ರೀ ದಿನೇಶ್ ಕುಲಾಲ್ ಮುಂಬೈ, ಕರ್ನಾಟಕ ಮಲ್ಲ ಪತ್ರಿಕೆಯ ವರದಿಗಾರರು, ಶ್ರೀ ಸುರೇಶ್ ಕುಲಾಲ್. ಶ್ರೀ ಗಿರಿಧರ್ ಜೆ ಮೂಲ್ಯ. ಶ್ರೀ ದಾಮೋದರ್ ಕುಲಾಲ್. ಶ್ರೀ ಸುಂದರ್ ಕುಲಾಲ್ ಮತ್ತು ಲಯನ್ ಅನಿಲ್ ದಾಸ್ ಮುಂತಾದವರು ಪಾಲ್ಗೊಂಡರು.

ಶ್ರೀ ಜಯಂತ್ ಸಂಕೋಳಿಗೆ ಹಾಗೂ ಪ್ರಕಾಶ್ ಪಿಳಿಕೂರು. ಮತ್ತು ರಂಜಿತ್ ಕುಲಾಲ್ ಮುಂತಾದವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಬ್ಬಕ್ಕ ಟಿವಿ. ಶಶಿಧರ್ ಪೊಯ್ತಬೈಲ್ ಮತ್ತು ಪೊಸಕುರಲ್ ವಾಹಿನಿ ಯವರು ಪ್ರಸಾರ ನಿರ್ವಹಣೆ ಮಾಡಿದ್ದರು..