
ಬಂಟ್ವಾಳ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನರಿಕೊಂಬು ಗ್ರಾ.ಪಂ.ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಮತ್ತು ಸಮಾಜ ಸೇವಾ ಸಹಕಾರಿ ಸಂಘ ನಿ.ಬಂಟ್ವಾಳ ಇದರ ನಿರ್ದೇಶಕರಾದ ಅರುಣ್ ಕುಲಾಲ್ ಬೋರುಗುಡ್ಡೆ ಹಾಗೂ ಅವರ ಮಗ ಧ್ಯಾನ್ ಇವರಿಗೆ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಸಾರ್ವಜನಿಕ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು.



ಸೋಮವಾರ ಸತ್ಯಶ್ರೀ ಕಲ್ಯಾಣ ಮಂಟಪ, ಪಾಣೆಮಂಗಳೂರು ಇಲ್ಲಿ ಭಾರತೀಯ ಜನತಾ ಪಾರ್ಟಿ, ನರಿಕೊಂಬು, ಓಂ ಶ್ರೀ ಗೆಳೆಯರ ಬಳಗ (ರಿ.), ನಾಯಿಲ ನರಿಕೊಂಬು, ಶ್ರೀ ದೇವಿ ಯುವಕ ಮಂಡಲ, ನಾಯಿಲ ಕಾಪಿಕಾಡು,ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ (ರಿ.), ನರಿಕೊಂಬು ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಸೇವಾ ಸಮಿತಿ, ನ್ಯಾಲ-ಮರ್ದೋಳಿ-ಕಾಪಿಕಾಡು ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ಡೋಬಯ್ಯ ಅರಳ, ದೇವಪ್ಪ ಪೂಜಾರಿ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್,ದಿನೇಶ್ ಅಮ್ಮ್ಟೂರ್, ಯಶೋಧರ ಕರ್ಬೆಟ್ಟು, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಯ್ಯೂರು ಉಲ್ಲಾಳ್, ಸಮಾಜ ಸೇವಾ ಬ್ಯಾಂಕ್ ನ ಸುರೇಶ ಕುಲಾಲ್, ದಾಸ್ ಪ್ರಮೋಷನ್ ಮಾಲಕರಾದ ಲಯನ್ ಅನಿಲ್ ದಾಸ್,ಕುಂಬಾರ ಗುಡಿ ಕೈಗಾರಿಗೆ ಸುಂದರ್ ಕುಲಾಲ್, ಪ್ರೇಮನಾಥ್ ಶೆಟ್ಟಿ ಅಂತರ, ರವಿ ಅಂಚನ್, ನುಡಿ ನಮನ ಸಲ್ಲಿಸಿ ಅವರ ಕಾರ್ಯ ವೈಕ್ಯರಿಯನ್ನು ಕೊಂಡಾಡಿದರು


ಈ ಸಂದರ್ಭದಲ್ಲಿ ಅರುಣ್ ಬೋರ್ ಗುಡ್ಡೆಯವರ ಶಾಶ್ವತ ನೆನಪಿಗಾಗಿ ನಾಯಿಲ ಪರಿಸರದ ಒಂದು ರಸ್ತೆಗೆ ಅವರ ಹೆಸರನ್ನು ಇಡಬೇಕೆಂದು ಸೇರಿದ ಸರ್ವರು ಅಭಿಪ್ರಾಯ ಭಟ್ಟರು.

ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಪ್ರಮುಖ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಪಂಚಾಯತ್ ಸದಸ್ಯರುಗಳು ಪಕ್ಷದ ಕಾರ್ಯಕರ್ತರು, ಸಂಘ ಸಂಸ್ಥೆಯ ಪದಾಧಿಕಾರಿಗಳು.ಸದಸ್ಯರುಗಳು, ಅವರ ಬಂಧು ಮಿತ್ರರು ಭಾಗವಹಿಸಿ ಪುಷ್ಪಾರ್ಚನೆ ಮಾಡಿದರು.
ನವೀನ್ ಕುಲಾಲ್ ಪುತ್ತೂರು ಪ್ರಸ್ತಾವನೆ ಮಾಡಿ, ಕಿರಣ್ ಅಟ್ಲೂರು ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.