
Read Time:38 Second
ಕಾಸರಗೋಡು: ಬದಿಯಡ್ಕ ಬೇಳ ಗ್ರಾಮದ ಮಾನ್ಯ ಆಲಂಪಾಡಿ ರಸ್ತೆ ಬಳಿ ಮುಂಡೋಡಿನಲ್ಲಿ ಕಾಸರಗೋಡು ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 95.04 ಲೀಟರ್ ಮಧ್ಯವನ್ನು ಹಾಗೂ ಮದ್ಯ ಸಾಗಟದ ಕಾರನ್ನು ವಶಪಡಿಸಿಕೊಂಡಿದೆ.


ಕಾರಿನಲ್ಲಿ ಮಧ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಆರೋಪಿ ಕುಂಜತ್ತೂರು ಶಾರದ ನಿವಾಸದ ಅಣ್ಣು ಯಾನೆ ಅರವಿಂದ ಭಂಡಾರಿ (44) ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗಾಗಿ ಅಬಕಾರಿಗಳ ಪೊಲೀಸರು ಬಲೆ ಬೀಸಿದ್ದಾರೆ.

