
Read Time:45 Second
ಮಂಗಳೂರು: ಪಾರ್ಕಿಂಗ್ ಮಾಡಿದ್ದ ಆಟೋರಿಕ್ಷಾವೊಂದನ್ನು ಕಳವುಗೈದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕಾವೂರು ಮುಲ್ಲಕಾಡು ನಿವಾಸಿ ಅಶೋಕ್ ಎಂಬವರ ಆಟೋರಿಕ್ಷಾ ಪಾರ್ಕಿಂಗ್ ಮಾಡಿದ್ದ ಜಾಗದಿಂದಲೇ ಎಗರಿಸಿದ್ದಾರೆ.


ಇವರು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಜ್ಯೋತಿ ಕೆಎಂಸಿ ಆಸ್ಪತ್ರೆ ಬಳಿಯ ಉಷಾ ಜ್ಯುವೆಲ್ಲರಿ ಹತ್ತಿರ ರಿಕ್ಷಾ ಪಾರ್ಕ್ ಮಾಡಿದ್ದರು.
ಅದೇ ಜಾಗಕ್ಕೆ ಬಂದು ನೋಡಿದಾಗ ಅವರ ಆಟೋ ಆ ಜಾಗದಲ್ಲಿ ಇರಲಿಲ್ಲ. ಆದ್ದರಿಂದ ಕೂಡಲೇ ಇವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

