
Read Time:47 Second
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವುಶು ಘಟಕ ಕರ್ನಾಟಕ ವುಶು ಸಂಸ್ಥೆ ಸಹಯೋಗದಲ್ಲಿ 24ನೇ ರಾಜ್ಯ ವುಶು ಚಾಂಪಿಯನ್‌ಷಿಪ್ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಏ.27 ರಿಂದ ನಡೆಯುತ್ತಿದೆ.



ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವುಶು ಚಾಂಪಿಯನ್ ಷಿಪ್ ನಲ್ಲಿ ಸುರತ್ಕಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ ಇದರ ವಿದ್ಯಾರ್ಥಿನಿ ಸಮೃದ್ಧಿ ಎಂ ಕುಲಾಲ್ ರವರು ಬೆಳ್ಳಿ ಪದಕ ಪಡೆದಿದ್ದಾರೆ.
ಇವರು 7 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಮರೋಳಿ ನಿವಾಸಿ ಮನೋಜ್ ಕುಮಾರ್ ಮತ್ತು ಗೀತಾ ದಂಪತಿಯ ಸುಪುತ್ರಿ.

