
ಹೊಸದಿಲ್ಲಿ: ಈ ವರ್ಷ ದೇಶದಲ್ಲೇ ಗರಿಷ್ಠ ತಾಪ ಮಾನವು ಹೊಸದಿಲ್ಲಿಯಲ್ಲಿ ಬುಧವಾರ ದಾಖಲಾಗಿದೆ. ರಾಷ್ಟ್ರ ರಾಜಧಾನಿ ಅಕ್ಷರಶಃ ಕಾದ ಬಾಣಲೆಯಾಗಿದ್ದು, ನಗರದ ಮಂಗೇಶ್‌ಪುರದಲ್ಲಿ ಬುಧವಾರ 52.3 ಡಿಗ್ರಿ ಸೆಲ್ಸಿಯಸ್ ತಾಪ ಮಾನ ದಾಖಲಾಗಿದೆ. ಇದು ದಿಲ್ಲಿಯಲ್ಲಿ ಇದುವರೆಗಿನ ಗರಿಷ್ಠ ತಾಪಮಾನವಾಗಿದೆ ಎಂದು ಹವಾ ಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಬಿಸಿಲಿನ ಬೇಗೆಯ ನಡುವೆ ವರುಣನ ಸಿಂಚನವೂ ಆಗಿದ್ದು, ಜನರು ತುಸು ನಿಟ್ಟುಸಿರು ಬಿಟ್ಟಿದ್ದಾರೆ. ಮಂಗಳವಾರ ದಿಲ್ಲಿ ಯಲ್ಲಿ 49.9 ಡಿ.ಸೆ. ತಾಪಮಾನ ದಾಖಲಾಗಿತ್ತು.
ವಿದ್ಯುತ್ ಬೇಡಿಕೆ ಹೆಚ್ಚಳ
ತಾಪಮಾನ ಹೆಚ್ಚಾಗುತ್ತಿದ್ದಂತೆ ಶರೀರವನ್ನು ತಂಪು ಮಾಡಿ ಕೊಳ್ಳಲು ಕೂಲರ್, ಎಸಿಗಾಗಿ ಬೇಡಿಕೆಯೂ ಹೆಚ್ಚಿದೆ. ಸಹಜ ವಾಗಿ ವಿದ್ಯುತ್ ಬಳಕೆಯೂ ಹೆಚ್ಚಾಗುತ್ತಿದೆ. ಬುಧವಾರ 8,302 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯು ಸಾರ್ವಕಾಲಿಕ ದಾಖಲೆಯಾಗಿದೆ.

ದಿಲ್ಲಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿದ್ಯುತ್ ಬೇಡಿಕೆಯು 8,300 ಮೆಗಾವ್ಯಾಟ್ ಗಡಿ ದಾಟಿದೆ. ವಿದ್ಯುತ್ ಪ್ರಸರಣ ಕಂಪೆನಿಗಳು ಈ ಬೇಸಗೆಯಲ್ಲಿ ವಿದ್ಯುತ್ ಬೇಡಿಕೆಯು 8,200 ಮೆಗಾವ್ಯಾಟ್ ತಲುಬಹುದು ಎಂದು ಅಂದಾಜಿಸಿದ್ದವು.

ತಂಪೆರೆದ ವರುಣ
ದಿಲ್ಲಿಯಲ್ಲಿ ಬುಧವಾರ ಮಳೆಯೂ ಸುರಿದಿದೆ.
ಗರಿಷ್ಠ ತಾಪಮಾನ
52.3 ಡಿ.ಸೆ.: 2024 ಮೇ 29ರಂದು ದಿಲ್ಲಿಯಲ್ಲಿ ಗರಿಷ್ಠ ತಾಪಮಾನ
51 ಡಿ. ಸೆ.: 2016ರಲ್ಲಿ ರಾಜಸ್ಥಾನದ ಫಲೋಡಿಯಲ್ಲಿನ ತಾಪ
50.8 ಡಿ.ಸೆ.: 2019ರಲ್ಲಿ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ತಾಪ
50.6 ಡಿ.ಸೆ: 1956ರಲ್ಲಿ ಅಳ್ವಾರದಲ್ಲಿ ದಾಖಲಾದ ತಾಪಮಾನ
ತಾಪ ಏರಿಕೆಗೆ ಕಾರಣ
-ರಾಜಸ್ಥಾನದ ಬಿಸಿಗಾಳಿಯು ಮೊದಲಿಗೆ ದಿಲ್ಲಿಯ ಹೊರ ವಲಯಗಳಿಗೆ ಅಪ್ಪಳಿಸುತ್ತದೆ.
-ಇದರಿಂದ ದಿಲ್ಲಿ ವಾತಾ ವರಣದಲ್ಲಿ ತಾಪಮಾನ ಏರಿಕೆಯಾಗುತ್ತಿದೆ.
-ದಿಲ್ಲಿಯಲ್ಲಿ ಬಯಲು ಪ್ರದೇಶಗಳಿರುವುದರಿಂದ ಉಷ್ಣಾಂಶ ಸಹಜವಾಗಿಯೇ ಏರಿಕೆಯಾಗುತ್ತದೆ: ಹವಾಮಾನ ಇಲಾಖೆ

