
Read Time:1 Minute, 18 Second
ಉಪ್ಪಿನಂಗಡಿ : ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಾಗೂ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಕಾರೊಂದು ಡಿಕ್ವಕಿಯಾಗಿರುವ ಘಟನೆ ಕೊಕ್ಕಡ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ.


ಕಾಡು ಡಿಕ್ಕಿಯಾಗಿ ಗಾಯಗೊಂಡಿರುವ ಗಾಯಾಳು ಸತೀಶ್ ಎಂಬುವವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಬ್ಬರ್ ಮರದ ಕಟ್ಟಿಗೆಯನ್ನು ಲೋಡ್ ಮಾಡಿಕೊಂಡು ಬಂದಿದ್ದ ಲಾರಿಯಲ್ಲಿ ಲೋಡರ್ ಆಗಿ ಬಂದಿದ್ದ ಸತೀಶ್ ಕಾಪಿನಬಾಗಿಲು ಎಂಬಲ್ಲಿ ಇಳಿದಿದ್ದರು. ಇಲ್ಲಿ ಲಾರಿ ಬದಿ ನಿಂತಿದ್ದ ಸತೀಶ್ ಅವರಿಗೆ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆಯಿತು. ಪರಿಣಾಮ ತೀವ್ರ ಗಾಯಗೊಂಡ ಅವರಿಗೆ ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.