
ಉಡುಪಿ ನಗರ ಠಾಣೆಯ ಹುಡುಗಿ ಅಪಹರಣ ಪ್ರಕರಣದಲ್ಲಿ, ಹುಡುಗಿಯ ಪೋಷಕರು ಹೈಕೋರ್ಟ್ ನಲ್ಲಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಇಂದು ನಡೆದಿದ್ದು, ಈ ವಿಚಾರಣೆಗೆ ಹುಡುಗಿಯಾದ ಜೀನ ಮೆರಿಲ್ ಮತ್ತು ಅಕ್ರಮ್ ತನ್ನ ವಕೀಲ ಮುಖೇನ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ..


ನ್ಯಾಯಾಲಯದ ವಿಚಾರಣೆಯಲ್ಲಿ ನ್ಯಾಯಾಧೀಶರ ಮುಂದೆ ತನ್ನನ್ನು ಯಾರೂ ಕೂಡ ಅಪಹರಿಸಿರುವುದಿಲ್ಲ, ನಾನು ಸ್ವ- ಇಚ್ಛೆಯಿಂದ ಅಕ್ರಮ್ ಜೊತೆ ತೆರಳಿರುವುದಾಗಿ ತಿಳಿಸಿರುತ್ತಾಳೆ. ಹುಡುಗಿಯ ತಾಯಿ ಹುಡುಗಿ ಜೊತೆ ಮಾತನಾಡಬೇಕು ಎಂದು ತಿಳಿಸಿದಾಗ, ನ್ಯಾಯಾಧೀಶರು ಸ್ವತಹ ತಮ್ಮ ಕೊಠಡಿಯಲ್ಲಿ ಹುಡುಗಿ ಜೊತೆ ತಾಯಿಯನ್ನು ಮಾತನಾಡಿಸಿರುತ್ತಾರೆ.
ನಂತರ ವಿಚಾರಣೆಯಲ್ಲಿ ತಾಯಿ ಮಗಳನ್ನು ತನ್ನ ಜೊತೆ ಕಳಿಸುವಂತೆ ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದು, ಇದಕ್ಕೆ ಹುಡುಗಿಯು ಒಪ್ಪಿರುವುದಿಲ್ಲ. ಅಲ್ಲದೇ ತಾನು ಅಕ್ರಮ್ ಜೊತೆ ಏ.19 ರಂದು ರಿಜಿಸ್ಟರ್ ಮದುವೆ ಮಾಡಿಕೊಳ್ಳುತ್ತಿದ್ದು, ಮದುವೆ ನಂತರ ತಾಯಿಯನ್ನು ಭೇಟಿಯಾಗುವುದಾಗಿ ತಿಳಿಸುತ್ತಾಳೆ. ಅಲ್ಲದೇ ತಾಯಿಯೊಂದಿಗೆ ಕೂಡ ಉತ್ತಮ ಬಾಂಧವ್ಯದೊಂದಿಗೆ ಇರುವುದಾಗಿ ತಿಳಿಸಿರುತ್ತಾಳೆ.


ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಏ.22 ಕ್ಕೆ ನಿಗದಿಪಡಿಸಿದ್ದು, ಅಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶಿಸಿರುತ್ತದೆ.
