
ಮಂಗಳೂರು : ಖಾಸಗಿ ಬಸ್‌ಗೆ ಪೈಪೋಟಿ ನೀಡುವ ಸಲುವಾಗಿ ಸರ್ಕಾರಿ ಬಸ್ ಚಾಲಕನೊಬ್ಬ ಎರ್ರಾಬಿರಿ ಬಸ್ ಚಾಲನೆ ಮಾಡುವ ಮೂಲಕ ಚಾಲಕನ ನಿರ್ಲಕ್ಷ್ಯದ ಚಾಲನೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾದ ಇಂದು ಮುಂಜಾನೆ ಮಂಗಳೂರು-ಮೂಡಬಿದ್ರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ವಮಂಜೂರು ಸಮೀಪ ಸಂಭವಿಸಿದೆ.


ಮಂಗಳೂರು ಮೂಡಬಿದ್ರೆ ಮಾರ್ಗವಾಗಿ ಕಾರ್ಕಳಕ್ಕೆ ಇತ್ತೀಚೆಗಷ್ಟೇ ಸರ್ಕಾರಿ ಬಸ್ ಸೇವೆಯನ್ನು ಆರಂಭ ಮಾಡಲಾಗಿದೆ. ಇದು ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳಿಗಂತೂ ಇದು ಸಾಕಷ್ಟು ಅನುಕೂಲವಾಗಿದ್ದು, ಸಾಕಷ್ಟು ಜನ ಈ ಬಸ್ ಪ್ರೋಯೋಜನ ಪಡೆಯುತ್ತಿದ್ದಾರೆ. ಖಾಸಗಿ ಬಸ್ ಗಳೇ ಹೆಚ್ಚಾಗಿ ಓಡಾಡುವ ಈ ರಸ್ತೆಯಲ್ಲಿ ಸರ್ಕಾರಿ ಬಸ್ ಈಗ ಪೈಪೋಟಿ ನೀಡಲು ಆರಂಭಿಸಿದೆ. ಹೆದ್ದಾರಿಯ ಅಭಿವೃದ್ದಿ ಕಾಮಗಾರಿ ನಡೆಯುತ್ತಿರುವ ಈ ವೇಳೆ ರಸ್ತೆಯಲ್ಲಿ ಸರ್ಕಾರಿ ಬಸ್ ಚಾಲಕರ ನಿರ್ಲಕ್ಷ್ಯದ ಚಾಲನೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ಖಾಸಗಿ ಬಸ್ ಹಿಂದಿಕ್ಕಲು ಹೇಗೆಂದರೆ ಹಾಗೆ ಬಸ್ ಓಡಿಸುವ ಮೂಲಕ ಬಸ್ ನಲ್ಲಿ ಪ್ರಯಾಣಿಕರು ಜೀವ ಕೈಲಿ ಹಿಡಿದು ಕುಳಿತುಕೊಳ್ಳುವಂತಾಗಿದೆ. ಇನ್ನು ಇವರ ಅತೀವೇಗದ ಚಾಲನೆಗೆ ರಸ್ತೆಯಲ್ಲಿ ಏಳುವ ದೂಳು ಹಿಂಬದಿ ವಾಹನ ಓಡಿಸುವ ಚಾಲಕರೂ ಪರದಾಟುವಂತೆ ಮಾಡುತ್ತಿದೆ. ಅಷ್ಟು ಮಾತ್ರವಲ್ಲದೆ ಹೃದಯಾಘಾತ, ಅಸ್ತಮದಂತಹ ಆರೋಗ್ಯ ಸಮಸ್ಯೆಗೂ ಆಹ್ವಾನ ನೀಡಿದಂತಾಗುತ್ತಿದೆ. ಇದುವರೆಗೆ ಖಾಸಗಿ ಬಸ್‌ಗಳ ಬೇಕಾಬಿಟ್ಟಿ ಓಡಾಟದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ಇದೀಗ ಸರ್ಕಾರಿ ಬಸ್ ಮೇಲೂ ಅದೇ ಆಕ್ರೋಶ ಕೇಳಿ ಬರುತ್ತಿದೆ. ಈ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಖಾಸಗಿ ಬಸ್ ಚಾಲಕರು ಹಾಗೂ ನಿರ್ವಾಹಕರು ಒತ್ತಾಯಿಸುತ್ತಿದ್ದಾರೆ.