ಪದವು ಫ್ರೆಂಡ್ಸ್ ಕ್ಲಬ್ ನ 49ನೇ ವರ್ಷದ ವಾರ್ಷಿಕೋತ್ಸವ ಆಚರಣೆ

0 0
Read Time:2 Minute, 27 Second

ಮಂಗಳೂರು : ಶಕ್ತಿನಗರದ ಪದವು ಫ್ರೆಂಡ್ಸ್ ಕ್ಲಬ್ ನ 49ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಶನಿವಾರ ನಡೆಯಿತು. ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್ .ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ರಂಗಕರ್ಮಿ ಜಿ.ಎಸ್.ಆಚಾರ್ ರವರಿಗೆ ಹಾಸ್ಯ ಚಕ್ರವರ್ತಿ ಬಿರುದಾಂಕಿತ ದಿ| ಮಾಧವ ಕೆ. ಶಕ್ತಿನಗರ ಸ್ಮಾರಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶಾಲಾ ನಾಯಕತ್ವ ಸಮಾವೇಶಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ದಾಕ್ಷಾಯಿನಿ ವೀರೇಶ್, ಪದವಿಪೂರ್ವ ಕಾಲೇಜಿಗೆ ಹೊಸಕಟ್ಟಡ ದೊರಕಲು ಸಹಕರಿಸಿದ ಜಯಾನಂದ.ಎಲ್ ಸುವರ್ಣ ಹಾಗೂ ಪ್ರೌಢಶಾಲೆಗೆ ನೂತನ ಮುಖ್ಯಶಿಕ್ಷಕ ಪ್ರಶಾಂತ್ ಕುಮಾರ್ ಕೆ.ಎಸ್. ರವರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಸ್ಥಳೀಯ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಆಟೋಟ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು.

ಪಿಎಂಶ್ರೀ ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ, ಪದವು ಅಂಗನವಾಡಿ ಹಾಗೂ ಎಲ್ ಕೆಜಿ,ಯುಕೆಜಿ ಪುಟಾಣಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯು ಸುವರ್ಣ ಮಹೋತ್ಸವಕ್ಕೆ ಕಾಲಿಟ್ಟ ಸಂಭ್ರಮವನ್ನು 50ನೇ ವರ್ಷದ ಚಿಹ್ನೆ ಹಾಗೂ ಶೀರ್ಷಿಕೆ ಗೀತೆಯನ್ನು ವಿಶಿಷ್ಟವಾಗಿ ಅನಾವರಣಗೊಳಿಸಲಾಯಿತು. ನಂತರ ಉಡುಪಿಯ ಅಭಿನಯ ಕಲಾವಿದರಿಂದ ’ಶಾಂಭವಿ’ ನಾಟಕ ಪ್ರದರ್ಶನಗೊಂಡಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣದ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಋತ್ವಿಕ್ ಕದ್ರಿ, ಮನಪಾ ಸದಸ್ಯೆ ವನಿತಾ ಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಆಂತರಿಕ ಲೆಕ್ಕಪರಿಶೋಧಕ ರವೀಂದ್ರ ರೈ ಸ್ವಾಗತಿಸಿದರು. ರಕ್ಷಕ್ ಪೂಜಾರಿ ವಂದಿಸಿದರು. ಹರೀಶ್ ಕುಮಾರ್ ಜೋಗಿ ಕಾರ್ಯಕ್ರಮ ನಿರೂಪಿಸಿದರು.

ವರದಿ : ಧನುಷ್ ಶಕ್ತಿನಗರ

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *