
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಮಾಸಿಕ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಮತ್ತು ಜಿಲ್ಲಾ ಕಾರ್ಯಕಾರಿಣಿ ಸದಸ್ಯರ ಪುನರಾಯ್ಕೆ ಪ್ರಕ್ರಿಯೆಯು ನಗರದ ವುಡ್ ಲಾಂಡ್ಸ್ ಹೋಟೆಲ್ ನಲ್ಲಿ ನಡೆಯಿತು.



ಜಿಲ್ಲಾಧ್ಯಕ್ಷರಾಗಿ ಅನಿಲ್ ದಾಸ್ ರವರು ಮರು ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಪ್ರಸಾದ್ ತೋಮಸ್ ಅರುಣ್ ಕುಮಾರ್ ಹಾಗೂ. ಇಫ್ತಿಕಾರ್ ಉಳ್ಳಾಲ್ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಆಜ್ಫರ್ ರಜಾಕ್, ಜೊತೆ ಕಾರ್ಯದರ್ಶಿಯಾಗಿ ಧನುಷ್ ಶೆಟ್ಟಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಕಿರಣ್ ಅಟ್ಟಲೂರ್ , ಕೋಶಾಧಿಕಾರಿಯಾಗಿ ಸುದೇಶ್ ಭಂಡಾರಿ ಇರಾ, ಸಂಚಾಲಕರಾಗಿ ಜಲೀಲ್ ಮುಡಿಪು ರವರು ಆಯ್ಕೆಯಾದರು.
ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಜಯಂತ್ ಎಸ್, ರಾಜೇಶ್, ಜಕಾರಿಯ, ಅರುಣ್ ಶೆಟ್ಟಿ, ವಿಧಾತ್ ಶೆಟ್ಟಿ, ಶಶಿ ಸೋಮಯ್ಯ, ಹಾಗೂ ಜರಲ್ಡ್ ರವರು ಆಯ್ಕೆಯಾದರು. ಮಂಗಳೂರು ನಗರದ ಅಧ್ಯಕ್ಷರಾಗಿ ಮೆಲ್ವಿನ್ ಪುನರೂರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಅಮ್ಮಿ ಆಯ್ಕೆಯಾದರು.



ಕಾರ್ಯಕ್ರಮವನ್ನು ಟಿ ಪ್ರಸಾದ್ ರವರು ಸ್ವಾಗತಿಸಿ ವಂದನಾರ್ಪಣೆಗೈದರು. ನೂತನ ಅಧ್ಯಕ್ಷರಾದ ಮೇಲ್ವಿನ್ ಪುನರೂರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷರಾದ ಅನಿಲ್ ದಾಸ್ ರವರು ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಹುದ್ದೆಗಳ ನಾಮ ನಿರ್ದೇಶನ ಮಾಡಿದ್ದರು. ಜಿಲ್ಲಾ ಆಟೋ ಘಟಕದ ಅಧ್ಯಕ್ಷರಾದ ಕನಕಪ್ಪ ರವರು ಹಾಗೂ ಹಿರಿಯ ಸಲಹೆಗಾರ ಜಿ ಕೆ ಭಟ್ ಉಪಸ್ಥಿತರಿದ್ದರು.


