ಕುಂಭಮೇಳದಲ್ಲಿ ಸನಾತನ ಧರ್ಮ ಸ್ವೀಕರಿಸಿದ 200 ಮಂದಿ ವಿದೇಶಿಗರು

0 0
Read Time:4 Minute, 24 Second

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬುಧವಾರ ಒಂದೇ ದಿನ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ 61 ವಿದೇಶಿಯರು ಸನಾತನ ಧರ್ಮವನ್ನು ಸ್ವೀಕರಿಸಿದರು. ಕುಂಭ ನಗರದ ಸೆಕ್ಟರ್ 17ರಲ್ಲಿರುವ ಶಕ್ತಿಧಾಮ ಆಶ್ರಮದಲ್ಲಿ ವೇದ ಮಂತ್ರಗಳ ಪಠಣದ ನಡುವೆ ಜಗದ್ಗುರು ಸಾಯಿ ಮಾ ಲಕ್ಷ್ಮಿ ದೇವಿ ಅವರಿಂದ 61 ವಿದೇಶಿಯರೂ ಸನಾತನ ಧರ್ಮ ಸ್ವೀಕರಿಸಿದರು. ಸಾಯಿ ಮಾ ಲಕ್ಷ್ಮಿ ದೇವಿಯ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ, ಶಕ್ತಿಧಾಮದ ಶಿಬಿರದಲ್ಲಿ ನಡೆದ ಈ ಪವಿತ್ರ ಮಹಾಕುಂಭ ಮೇಳದಲ್ಲಿ 200ಕ್ಕೂ ಹೆಚ್ಚು ವಿದೇಶಿಯರು ಸನಾತನ ದೀಕ್ಷೆಯನ್ನು ಸ್ವೀಕರಿಸಿದಂತಾಯಿತು.

ಈ ಶುಭ ಸಂದರ್ಭದಲ್ಲಿ ಭಕ್ತರು ಓಂ ನಮಃ ಶಿವಾಯ ಮಂತ್ರವನ್ನು ಹಾಡುತ್ತಾ ನೃತ್ಯ ಮಾಡುತ್ತಿರುವುದು ಗಮನ ಸೆಳೆಯಿತು. ಪ್ರಾರ್ಥನೆ ಮತ್ತು ಭಜನೆ, ಕೀರ್ತನೆಗಳಲ್ಲಿ ಭಾಗವಹಿಸಿ, ಕಾರ್ಯಕ್ರಮದ ಕೇಂದ್ರ ಬಿಂದುವಾದರು. ಸನಾತನ ಧರ್ಮದ ನಿಜವಾದ ಅರ್ಥವೇನು ಎಂಬುವುದರ ಕುರಿತು ಹಲವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸನಾತನ ಧರ್ಮ ಮಾತ್ರ ಸನ್ಮಾರ್ಗ ತೋರಬಹುದು: ದೀಕ್ಷೆಯ ಕುರಿತು ಮಾತನಾಡಿದ ಜಗದ್ಗುರು ಸಾಯಿ ಮಾತೆ ಲಕ್ಷ್ಮಿ ದೇವಿ, ಕಾಲಾತೀತವಾದ ಸನಾತನ ಧರ್ಮದ ಆಕರ್ಷಣೆಯಿಂದಾಗಿ ಪ್ರಪಂಚದಾದ್ಯಂತ ಜನರು ಆಧ್ಯಾತ್ಮಿಕತೆಯಲ್ಲಿ ಭಾಗಿಯಾಗುವ ಮೂಲಕ ಸಂತಸ ಕಂಡುಕೊಳ್ಳುತ್ತಿದ್ದಾರೆ. ವ್ಯಸನ ಮತ್ತು ಒತ್ತಡದಲ್ಲಿ ಮುಳುಗಿರುವ ಇಂದಿನ ಯುವಕರಿಗೆ ಸನಾತನ ಧರ್ಮ ಮಾತ್ರ ಸರಿಯಾದ ಮಾರ್ಗವನ್ನು ತೋರಿಸಬಲ್ಲದು. ಇದರಿಂದಾಗಿಯೇ ಜನರು ಹಿಂದೂ ಧರ್ಮದತ್ತ ಆಕರ್ಷಿತರಾಗಲು ಮತ್ತು ಅದನ್ನು ಅಳವಡಿಸಿಕೊಳ್ಳಲು ಇದೇ ಕಾರಣ ಎಂದು ಹೇಳಿದರು.

ಬೆಲ್ಜಿಯಂನಲ್ಲಿ ಮೂಳೆಚಿಕಿತ್ಸಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ಯಾಥರೀನ್ ಗಿಲ್ಡೆಮಿನ್ ಕೂಡ ಗುರು ದೀಕ್ಷೆ ಪಡೆದವರಲ್ಲಿ ಒಬ್ಬರಾಗಿದ್ದು, ದೈನಂದಿನ ಜೀವನದ ಗಡಿಬಿಡಿ, ಒತ್ತಡ, ಜಂಜಾಟ ತನ್ನ ಜೀವನದಲ್ಲಿ ಹೆಚ್ಚಾಗಿತ್ತು. ತನ್ನ ವೈಯಕ್ತಿಕ ಜೀವನ ಕೂಡ ಸುಂದರವಾಗಿ ಇದ್ದಿರಲಿಲ್ಲ. ಹದಗೆಡುತ್ತಿದ್ದ ಮಾನಸಿಕ ಸ್ಥಿತಿಯಿಂದ ಹೊರಬರಲು ಒದ್ದಾಡುತ್ತಿದ್ದೆ. ನೆಮ್ಮದಿ ಹಾಗೂ ಆತ್ಮ ತೃಪ್ತಿಗಾಗಿ ಜಗದ್ಗುರು ಸಾಯಿ ಮಾ ಅವರನ್ನು ನಾನು ಕಾಣಬೇಕಾಯಿತು. ಇವರಿಂದ ನನ್ನ ಜೀವನದಲ್ಲಿ ಇದೀಗ ಹೊಸ ಚೈತನ್ಯ ಬಂದಿದೆ ಎಂದರು.

ಸನಾತನ ಧರ್ಮದ ಸರಳತೆ ನನ್ನನ್ನು ಸೆಳೆದಿದೆ: ಮಾರುಕಟ್ಟೆ ಕ್ಷೇತ್ರದಲ್ಲಿ ಕೆಲಸ ಮಾಡುವ ಐರ್ಲೆಂಡ್‌ನ ಡೇವಿಡ್ ಹ್ಯಾರಿಂಗ್ಟನ್ ಮಾತನಾಡಿ, ಸನಾತನ ಧರ್ಮದ ಸರಳತೆ ಏಳು ಸಮುದ್ರಗಳ ಆಚೆಯಿಂದ ನನ್ನನ್ನು ಸೆಳೆದಿದೆ. ನಮ್ಮ ಮೇಲೆ ಒತ್ತಡ ಹೇರದ ಏಕೈಕ ಜೀವನ ವಿಧಾನ ಇದಾಗಿದೆ. ಅದರ ಸರಳತೆ ಮತ್ತು ಪ್ರಾಮಾಣಿಕತೆಯು ಮೊದಲಿನಿಂದಲೂ ನನ್ನನ್ನು ಆಕರ್ಷಿಸಿತ್ತು. ಮಹಾ ಕುಂಭಮೇಳದ ಅದ್ಭುತ ಮತ್ತು ಪವಿತ್ರ ಸಂದರ್ಭದಲ್ಲಿ, ನಾನು ಸನಾತನ ಧರ್ಮವನ್ನು ಸ್ವೀಕರಿಸಿದೆ. ಅದು ನನಗೆ ಶಾಂತಿ ಮತ್ತು ಖುಷಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜೀವನದಲ್ಲಿ ಕಳೆದುಕೊಂಡದ್ದನ್ನು ಹುಡುಕುತ್ತಿದ್ದೆ. ನನ್ನ ಹುಡುಕಾಟ ಸನಾತನ ಧರ್ಮದಲ್ಲಿ ಸಿಕ್ಕಿದೆ. ಜಗದ್ಗುರು ಸಾಯಿ ಮಾತೆಯ ಸಾಮೀಪ್ಯದಲ್ಲಿ ನನ್ನ ಜೀವನಕ್ಕೆ ಹೊಸ ದಿಕ್ಕು ಸಿಕ್ಕಿತು. ಇಂದು ನಾನು ಅವರಿಂದ ಗುರು ದೀಕ್ಷೆ ಪಡೆದಿದ್ದೇನೆ. ಇದಕ್ಕಾಗಿಯೇ ಮಹಾಕುಂಭ ನನ್ನ ಜೀವನದಲ್ಲಿ ಬಂದಿರಬಹುದು. ಗುರು ದೀಕ್ಷೆಯನ್ನು ಸ್ವೀಕರಿಸಿ ನಾನು ಉತ್ಸುಕನಾಗಿದ್ದೇನೆ ಎಂದು ಫ್ರಾನ್ಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಆಲಿವಿಯರ್ ಗಿಯುಲಿಯೇರಿ ತಮ್ಮ ಅನುಭವ ಹಂಚಿಕೊಂಡರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *