
Read Time:1 Minute, 24 Second
ಕಾರ್ಕಳ : ಕಳೆದ ಕೆಲವು ದಿನಗಳ ಹಿಂದೆ ಚಿನ್ನ ಖರೀದಿ ನೆಪದಲ್ಲಿ ಕಾರ್ಕಳದ ಆಭರಣದ ಅಂಗಡಿಗೆ ಬಂದ ಕಳ್ಳನೋರ್ವ ಮಹಿಳಾ ಸಿಬ್ಬಂದಿಯ ಕಣ್ಣೆದುರಿನಲ್ಲೇ ಚಿನ್ನದ ಕರಿಮಣಿ ಸರ ಎಗರಿಸಿಕೊಂಡು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.


ಆರೋಪಿ ಮಹಿಳಾ ಸಿಬ್ಬಂದಿಯ ಕಣ್ಣೆದುರಿನಲ್ಲೇ ಚಿನ್ನದ ಕರಿಮಣಿ ಸರ ಎಗರಿಸಿಕೊಂಡು ಪರಾರಿಯಾದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಆರೋಪಿಯ ಪತ್ತೆಗಾಗಿ ಕಾರ್ಕಳ ಪೊಲೀಸರು ಧಾರವಾಡಕ್ಕೆ ತೆರಳಿ ಹುಬ್ಬಳ್ಳಿ ಧಾರವಾಡ ಪೊಲೀಸರ ನೆರವಿನಿಂದ ಜನ್ನತ್ ನಗರದ ನಿವಾಸಿಯಾದ ಮೊಹಮ್ಮದ್ ಆಲಿ ಖಾನ್ ಯಾನೆ ಮೊಹಮದ್ ಇರಾನಿ ಎಂಬಾತನನ್ನು ಬಂಧಿಸಿದ್ದಾರೆ. ಈತ ಇರಾನಿ ತಂಡದ ಸದಸ್ಯ ಎನ್ನಲಾಗಿದೆ.


ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿನಿಂದ ವಿಳಾಸ ಕೇಳುವ ನೆಪದಲ್ಲಿ ಪಾದಾಚಾರಿ ಒಂಟಿ ಮಹಿಳೆಯರ ಸರಗಳನ್ನು ಎಗರಿಸಿಕೊಂಡು ಹೋದ ಘಟನೆಗಳು ನಡೆದಿದ್ದು, ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
