ಸಚಿತಾ ರೈ ವಿರುದ್ದ ಮತ್ತೊಂದು ವಂಚನಾ ಕೇಸ್ ದಾಖಲು..!!

0 0
Read Time:1 Minute, 14 Second

ಮಂಗಳೂರು: ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ಲಪಟಾಯಿಸಿದ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಡಿವೈಎಫ್‌ಐ ಮಾಜಿ ನೇತಾರೆ ಸಚಿತಾ ರೈ (27) ವಿರುದ್ಧ ಕಾಸರಗೋಡು ಪೊಲೀಸರು ಮತ್ತೊಂದು ದಾಖಲಿಸಿಕೊಂಡಿದ್ದಾರೆ.

ಕೇಸ್ ಕಾಸರಗೋಡು ಸಮೀಪದ ರಾಮದಾಸನಗರದ ಯುವತಿಯೋರ್ವೆ ನೀಡಿದ ದೂರಿನಂತೆ ಕೇಸು ದಾಖಲಾಗಿದೆ. ನಗರದ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಸಂಶೋಧನಾ ಕೇಂದ್ರೀಯವಿದ್ಯಾಲಯದಲ್ಲಿ ಅಧ್ಯಾಪಿಕೆ ಉದ್ಯೋಗದ ಭರವಸೆಯೊಡ್ಡಿ 13.26 ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

2022ನೇ ಡಿಸೆಂಬರ್ 19ರಿಂದ 2024ನೇ ಜುಲೈ 14ರ ವರೆಗಿನ ಕಾಲಾವಧಿಯಲ್ಲಿ ಸಚಿತಾ ರೈಗೆ ಹಣ ನೀಡಿರುವುದಾಗಿ ತಿಳಿಸಲಾಗಿದೆ. ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾಗಿರುವ ಈಗಲೂ ಸಚಿತಾ ರೈ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಳೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *