Indian -Army: ಭಾರತೀಯ ಮಿಲಿಟರಿಯಲ್ಲಿ ಜಾಬ್‌ ಆಫರ್

0 0
Read Time:2 Minute, 57 Second

Indian -Army:  ಭಾರತೀಯ ಮಿಲಿಟರಿಯಲ್ಲಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಕ್ರೀಡಾ ಕೋಟಾದಡಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ: ಕ್ರೀಡಾ ಕೋಟಾದಡಿ ನೇರ ನೇಮಕಾತಿ ಮೂಲಕ ಹವಿಲ್ದಾರ್ ಮತ್ತು ನಾಯಿಬ್ ಸುಬೇದಾರ್ ಹುದ್ದೆ ಯಾವೆಲ್ಲ ಕ್ರೀಡೆಗಳ ಸಾಧಕರು ಅರ್ಜಿ ಸಲ್ಲಿಸಬಹುದು?: ಅಥ್ಲೆಟಿಕ್ಸ್‌, ಆರ್ಚರಿ, ಬಾಸ್ಕೆಟ್‌ ಬಾಲ್, ಬಾಕ್ಸಿಂಗ್, ಡೈವಿಂಗ್, ಫೂಟ್‌ಬಾಲ್‌, ಫೆನ್ಸಿಂಗ್, ಜಿಮ್ನಾಸ್ಟಿಕ್, ಹಾಕಿ, ಹ್ಯಾಂಡ್‌ಬಾಲ್‌, ಜುಡೊ, ಕಬಡ್ಡಿ, ಕಾಯಕಿಂಗ್ ಮತ್ತು Canoeing, ಸ್ವಿಮ್ಮಿಂಗ್, ಸೇಲಿಂಗ್, ಶೂಟಿಂಗ್, ಟ್ರಯಾಥ್ಲಾನ್, ವಾಲಿಬಾಲ್, Wushu, ವ್ಹೇಟ್‌ ಲಿಫ್ಟಿಂಗ್, ಕುಸ್ತಿ, ವಿಂಟರ್ ಗೇಮ್ಸ್‌, ರೋವಿಂಗ್ ಕ್ರೀಡೆಗಳಲ್ಲಿ ಜೂನಿಯರ್ ಮೆಡಲಿಸ್ಟ್‌, ಸೀನಿಯರ್ ಮೆಡಲಿಸ್ಟ್‌ ಸಾಧನೆ ಮಾಡಿದವರು, ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ: ಕನಿಷ್ಠ 10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:

*ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಕನಿಷ್ಠ 17 ವರ್ಷ 06 ತಿಂಗಳು ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.

* ಅಭ್ಯರ್ಥಿಗಳು 2000 ಮಾರ್ಚ್ 31 ಮತ್ತು 2007 ರ ಏಪ್ರಿಲ್ 01 ರ ನಡುವೆ ಜನಿಸಿರಬೇಕು.

* ಅಭ್ಯರ್ಥಿಗಳು ರಾಜ್ಯ / ರಾಷ್ಟ್ರ / ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಕ್ರೀಡೆಯಲ್ಲಿ ಜೂನಿಯರ್ ಲೆವೆಲ್‌ ಅಥವಾ ಸೀನಿಯರ್ ಲೆವೆಲ್ ಮೆಡಲಿಸ್ಟ್‌ ಆಗಿರಬೇಕು.

* ಇತರೆ ಫಿಸಿಕಲ್ ಸ್ಟ್ಯಾಂಡರ್ಡ್‌ ಅನ್ನು ಅಧಿಸೂಚನೆಯಲ್ಲಿ ಸೂಚಿಸಿದಂತೆ ಮಹಿಳಾ / ಪುರುಷ ಅಭ್ಯರ್ಥಿಗಳು ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?: www.joinindianarmy.nic.in ಈ ವೆಬ್‌ ಸೈಟ್‌ ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಿ. ನಂತರ ಭರ್ತಿ ಮಾಡಿದ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಸಿ. ಅರ್ಜಿಯೊಂದಿಗೆ ಶೈಕ್ಷಣಿಕ ಅರ್ಹತೆಗಳು, ಕ್ರೀಡಾ ಸಾಧನೆಯ ಸರ್ಟಿಫಿಕೇಟ್‌ ಗಳನ್ನು ಸಹ ಲಗತ್ತಿಸಿ ಕಳುಹಿಸುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಆರ್ಮಿ ಸ್ಪೋರ್ಟ್ಸ್‌ ಕಂಟ್ರೋಲ್ ಬೋರ್ಡ್‌, ನಿರ್ದೇಶಕರು ಪಿಟಿ ಮತ್ತು ಸ್ಪೋರ್ಟ್ಸ್‌, ಜೆನೆರಲ್ ಸ್ಟಾಫ್ ಬ್ರ್ಯಾಂಚ್, IHQ of MoD (ಆರ್ಮಿ), ರೂಮ್‌ ನಂಬರ್ 747 ‘ಎ’ ವಿಂಗ್, ಸೇನಾ ಭವನ್, ಪಿಒ ನವದೆಹಲಿ – 110011. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2025 ರ ಫೆಬ್ರುವರಿ 28 ರಂದು

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *