ಇದ್ಯಾವ ಸೀಮೆ ಪ್ರೀತಿಯೋ..!! ಮೂರು ಮಕ್ಕಳಿರುವ ವಿವಾಹಿತನ ಜೊತೆ 19 ವರ್ಷದ ಯುವತಿ ಎಸ್ಕೇಪ್….!!

0 0
Read Time:2 Minute, 46 Second

ಮಂಗಳೂರು: ಈಗಿನ ಕಾಲದಲ್ಲಿ ಪ್ರೀತಿ- ಪ್ರೇಮ ಎಲ್ಲವೂ ಒಂದು ಅರ್ಥವಿಲ್ಲದ ಬಂಧವಾಗಿಬಿಟ್ಟಿದೆ. ಯಾವುದೋ ಆಮಿಷಕ್ಕೋ, ಆಕರ್ಷಣೆಗೋ ಬಲಿಯಾಗಿ ಹೆಣ್ಮಕ್ಕಳು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಪ್ರಾಯದ ತರುಣಿಯರು ಮುದುಕನನ್ನು ವಿವಾಹವಾಗೋದು, ಆಂಟಿಯರು ಶಾಲೆ ಕಲಿಯುವ ಬಾಲಕರೊಂದಿಗೆ ಓಡಿ ಹೋಗುವುದು ಇಂತಹ ಚಿತ್ರವಿಚಿತ್ರ ಸನ್ನಿವೇಶಗಳನ್ನು ನಾವು ಇತ್ತೀಚೆಗೆ ಸಮಾಜದಲ್ಲಿ ನೋಡುತ್ತಲೇ ಇರುತ್ತೇವೆ. ಕಾಮದಾಹಕ್ಕೋ, ಹಣದ ಆಸೆಗೋ ಇಂತಹ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಭವಿಷ್ಯವನ್ನು ತಾವೇ ನರಕಕ್ಕೆ ದೂಡಿಕೊಳ್ಳುವ ಯುವಜನತೆಗೆ ಯಾವಾಗ ಬುದ್ಧಿ ಬರುತ್ತೋ..? ಅದೇನೇ ಇರಲಿ…ಇದೀಗ ಇಲ್ಲೊಂದು ಅಂತಹುದೇ ಅಚ್ಚರಿಕರ ಘಟನೆಯೊಂದು ನಡೆದಿದೆ. ಇದನ್ನು ಕೇಳಿದ್ರೆ ನೀವೂ ಶಾಕ್ ಆಗೋದು ಗ್ಯಾರಂಟಿ…

19ರ ತರುಣಿ ಮೂರು ಮಕ್ಕಳಿರುವ ವಿವಾಹಿತನೊಂದಿಗೆ ಎಸ್ಕೇಪ್…!!

ಹೌದು..ಆದೂರು ನಿವಾಸಿ, ನರ್ಸಿಂಗ್ ಕಲಿಯುತ್ತಿರುವ 19ರ ಹರೆಯದ ವಿದ್ಯಾರ್ಥಿನಿ ಹೆಂಡತಿ ಮತ್ತು ಮೂವರು ಮಕ್ಕಳಿರುವ ನಾಟೆಕಲ್ಲಿನ ವಿವಾಹಿತನ ಜೊತೆ ಪರಾರಿಯಾಗಿರುವ ಘಟನೆ ನಡೆದಿದ್ದು ಈ ಬಗ್ಗೆ ಸ್ಥಳೀಯರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ. ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಆ ಯುವಕ ಮತ್ತು ಯುವತಿ ಯುವಕನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ.

ಪತ್ನಿಯ ಪರ್ಮಿಷನ್ ಮೇರೆಗೆ ಯುವತಿಯನ್ನು ಮದ್ವೆ ಆಗ್ತೇನೆಂದ ಭೂಪ..!!

ಯುವಕ ಮತ್ತು ಯುವತಿಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಅಲ್ಲಿ ಯುವತಿ ಈತನೊಂದಿಗೇ ಹೋಗುವುದಾಗಿ ಪಟ್ಟು ಹಿಡಿದಿದ್ದಾಳೆ. ಅದಲ್ಲದೆ ಆಕೆಯ ಹೆತ್ತವರನ್ನು ಠಾಣೆಗೆ ಕರೆಸಿ ಮಾತನಾಡಿಸಿದಾಗ ಕೂಡಾ ಆಕೆ ಅದೇ ನಿರ್ಧಾರವನ್ನು ವ್ಯಕ್ತಪಡಿಸಿದ್ದಾಳೆ. ಆಕೆಯ ಪ್ರಿಯತಮನನ್ನು ವಿಚಾರಿಸಿದಾಗ ಕೂಡಾ ತಾನು ಪತ್ನಿಯ ಒಪ್ಪಿಗೆಯಿಂದ ಯುವತಿಯನ್ನು ಮದ್ವೆಯಾಗುತ್ತೇನೆ ಎಂದು ಹೇಳಿದ್ದಾನೆ. ಇನ್ನು ಯುವತಿ ಆಕೆಯ ಪ್ರಿಯಕರನೊಂದಿಗೆ ತೆರಳಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ಪೊಲೀಸರಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಒಟ್ಟಾರೆಯಾಗಿ ಈ ವಿಚಿತ್ರ ಘಟನೆ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ‌.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *