ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ..!

0 0
Read Time:1 Minute, 37 Second

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟ ಸೋಮವಾರ ಸೇವೆಯಾಟದೊಂದಿಗೆ ಆರಂಭವಾಯಿತು.

ದೇಗುಲದ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ ಅವರು ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸುವ ಮೂಲಕವಾಗಿ ತಿರುಗಾಟಕ್ಕೆ ಚಾಲನೆ ನೀಡಿದರು.

ಮೊಕ್ತೇಸರ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರುಗುತ್ತು, ಆರೂ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ , ದೇವಸ್ಥಾನದ ತಂತ್ರಿ ವೇದವ್ಯಾಸ ತಂತ್ರಿ, ಹರಿ ಉಡುಪ ಮೂಡುಮನೆ , ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ರಮಾನಾಥ ರೈ, ಕಟೀಲು ಶ್ರೀದುರ್ಗಾಪರಮೇಶ್ವರೀ ಯಕ್ಷಧರ್ಮ ಬೋಧಿನಿ ಚಾರಿಟಬೇಲ್‌ ಟ್ರಸ್ಟ್‌ ಅಧ್ಯಕ್ಷ ರಾಘವೇಂದ್ರ ಆಚಾರ್‌ ಬಜಪೆ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಗೆಜ್ಜೆ ಮುಹೂರ್ತಕ್ಕೆ ಪೂರ್ವಭಾವಿಯಾಗಿ ದೇವಸ್ಥಾನದ ಒಳಗಿನ ಗೋಪುರದಲ್ಲಿ ಎಲ್ಲ ಆರು ಮೇಳಗಳ ಪ್ರಧಾನ ಭಾಗವತರ ಹಿಮ್ಮೇಳದೊಂದಿಗೆ ತಾಳಮದ್ದಳೆ ನಡೆಯಿತು. ಬಳಿಕ ರಥಬೀದಿಯಲ್ಲಿ ಆರು ಮೇಳಗಳ ದೇವರಿಗ ಚೌಕಿ ಪೂಜೆ ನಡೆದ ಬಳಿಕ ಬಯಲಾಟ ಪ್ರದರ್ಶನಗೊಂಡಿತು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *