
Read Time:1 Minute, 14 Second
ಮಂಗಳೂರು: ವೈದ್ಯಕೀಯ ಸೇವೆಯ ಜೊತೆಗೆ ನಾಡು ನುಡಿ ನೆಲ ಜಲ ಪರಿಸರ ಪ್ರಕೃತಿಯ ಉಳಿವಿಗಾಗಿ ಸಾಹಿತ್ಯ ಸಂಘಟನೆ ಹಾಗೂ ಜನಜಾಗೃತಿಯ ಮೂಲಕ ಮಾಡಿದ ಜೀವಮಾನದ ಸಾಧನೆಗೆ ಮಂಗಳೂರು ವೈದ್ಯಕೀಯಸಂಘ( ಐಎಂಎ) ದ ವತಿಯಿಂದ ಚೊಚ್ಚಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ದಕ ಮತ್ತು ಉಡುಪಿ ಜಿಲ್ಲೆಯ ಗಣ್ಯರಾದ ಡಾ. ಶಾಂತರಾಮ್ ಶೆಟ್ಟಿ, ನಾಡೋಜ ಜಿ ಶಂಕರ್, ಬಹುಭಾಷಾ ಚಿತ್ರನಟ ಸುಮನ್ ತಲ್ವಾರ್, ನಿಟ್ಟೆ ವಿವಿಯ ಡಾ ಸತೀಶ್ ಭಂಡಾರಿ, ಆಕಾಶವಾಣಿಯ ವಸಂತ್ ಪೆರ್ಲ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಹಾಗೂ ಹಾಲಿ ಅಧ್ಯಕ್ಷರುಗಳಾದ ಪ್ರದೀಪ ಕುಮಾರ್ ಕಲ್ಕೂರ ಮತ್ತು ಡಾ ಶ್ರೀನಾಥ್ ಉಜಿರೆ ಸಹಿತ ಐಎಂಎ ಮಂಗಳೂರು ಶಾಖೆಯ ಹಿರಿ ಕಿರಿಯ ಮತ್ತು ಮಹಿಳಾ ನಾಯಕ ನಾಯಕಿಯರು, ಉಭಯ ಜಿಲ್ಲೆಗಳ ಕನ್ನಡ ಪರ ಸಂಘಟನೆಯ ನಾಯಕರುಗಳ ಉಪಸ್ಥಿತಿಯಲ್ಲಿ ಜೀವಮಾನದ ಸಾಧನೆಗಾಗಿ ಡಾ ಎಂ ಅಣ್ಣಯ್ಯ ಕುಲಾಲ್ ಉಲ್ತೂರು ಅವರಿಗೆ ನೀಡಿ ಗೌರವಿಸಲಾಯಿತು.

