ಸರ್ಕಾರಿ ನೌಕರನಿಗೆ ಹನಿಟ್ರ್ಯಾಪ್, ಕೋಟಿ ಕೋಟಿ ಸುಲಿಗೆ..! – ಅಣ್ಣ-ತಂಗಿ ಸೇರಿದಂತೆ ಮೂವರು ಅರೆಸ್ಟ್

0 0
Read Time:2 Minute, 56 Second

ಬೆಂಗಳೂರು: ಕೇಂದ್ರ ಸರ್ಕಾರಿ ನೌಕರನಿಗೆ ಹನಿಟ್ರ್ಯಾಪ್‌ (Honey Trap) ಮಾಡಿ, 2.5 ಕೋಟಿ ರೂಪಾಯಿ ವಸೂಲಿ ಮಾಡಿದ್ದ ಖತರ್ನಾಕ್‌ ಗ್ಯಾಂಗ್‌ ಅನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ಸರ್ಕಾರಿ ನೌಕರನನ್ನು ಜಿಮ್‌ನಲ್ಲಿ ಪರಿಚಯ ಮಾಡಿಕೊಂಡ ಮಹಿಳೆ, ನೌಕರನ ಖಾಸಗಿ ವಿಡಿಯೊ ಇಟ್ಟುಕೊಂಡು ತನ್ನ ಸಹಚರರ ಜತೆ ಸೇರಿ ಹಣ ಪೀಕಿದ್ದು, ಮತ್ತಷ್ಟು ಹಣಕ್ಕೆ ಡಿಮ್ಯಾಂಡ್‌ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ.

ತಬಸುಮ್ ಬೇಗಂ, ಅಜೀಮ್ ಉದ್ದಿನ್, ಹಾಗೂ ಅಭಿಷೇಕ್ ಬಂಧಿತ ಆರೋಪಿಗಳು. ಆರ್.ಟಿ. ನಗರದಲ್ಲಿ ಘಟನೆ ನಡೆದಿದ್ದು, ಜಿಮ್‌ನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯ ಖಾಸಗಿ ವಿಡಿಯೊ ಮಾಡಿಟ್ಟುಕೊಂಡಿದ್ದ ಮಹಿಳೆ ಬ್ಲ್ಯಾಕ್‌ಮೇಲ್‌ ಮಾಡಿ ಬರೋಬ್ಬರಿ 2.5 ಕೋಟಿ ರೂ.ಗೆ ವಸೂಲಿ ಮಾಡಿದ್ದಳು. ಬಳಿಕ ಮತ್ತಷ್ಟು ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದಳು. ಇದರಿಂದ ಭಯಭೀತರಾದ ಅಧಿಕಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹನಿಟ್ರ್ಯಾಪ್‌ ಸಂತ್ರಸ್ತ ಕೇಂದ್ರ ಸರ್ಕಾರದ ನೌಕರ ಆಗಿದ್ದು, ಬೆಂಗಳೂರಿನ ಆರ್.ಟಿ. ನಗರದ ಖಾಸಗಿ ಜಿಮ್‌ವೊಂದಕ್ಕೆ ಹೋಗಿದ್ದರು. ಅಲ್ಲಿ ಜಿಮ್‌ಗೆ ಬರುತ್ತಿದ್ದ ತಬಸುಮ್ ಅವರ ಪರಿಚಯ ಆಗಿತ್ತು. 48 ವರ್ಷದ ಕೇಂದ್ರ ಸರ್ಕಾರಿ ನೌಕರ ಕೋಟಿ ಕುಳ ಎಂಬುದನ್ನು ಅರಿತ ತಬಸುಮ್ ಆತನಿಗ ಗಾಳ ಹಾಕಿದ್ದಳು. ಆರಂಭದಲ್ಲಿ ಜಿಮ್‌ನಲ್ಲಿ ಮಾತನಾಡಿಸುತ್ತಿದ್ದ ತಬಸುಮ್, ನಂತರ ಫೋನ್ ನಂಬರ್ ಪಡೆದು ಚಾಟಿಂಗ್ ಮಾಡುತ್ತಿದ್ದಳು. ನಂತರ, ತಾನೊಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದು, ಅದಕ್ಕೆ ಒಂದಷ್ಟು ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಇದೇ ನೆಪದಲ್ಲಿ 2021ರಿಂದ ಹಂತ ಹಂತವಾಗಿ ಹಣವನ್ನು ಪಡೆದುಕೊಂಡಿದ್ದಳು. ಇದಾದ ನಂತರ ನೌಕರರನ್ನು ತಬಸುಮ್ ಗ್ಯಾಂಗ್‌ನಿಂದ ಹನಿಟ್ರ್ಯಾಪ್ ಮಾಡಲು ಮುಂದಾಗಿದೆ.

ನೌಕರನ ಕೆಲವೊಂದು ಖಾಸಗಿ ಫೋಟೊ, ವಿಡಿಯೊಗಳನ್ನು ಸೆರೆ ಹಿಡಿದುಕೊಂಡಿದ್ದ ತಬಸುಮ್, ಅವುಗಳನ್ನು ವಾಟ್ಸ್‌ ಆ್ಯಪ್‌ಗೆ ಕಳುಹಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾಳೆ. ಹಂತ ಹಂತವಾಗಿ ಬೆದರಿಕೆ ಹಾಕಿ ಬರೋಬ್ಬರಿ 2.5 ಕೋಟಿ ರೂ. ಹಣವನ್ನು ವಸೂಲಿ ಮಾಡಿದ್ದಾಳೆ. ಇದರ ನಂತರವೂ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ನೌಕರ, ಸಿಸಿಬಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *