ಹಿಂದೂ ಮುಖಂಡರ ಮೇಲೆ ದ್ವೇಷ ಸಾಧಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ..! ಹೀಗಿದೆ ನೋಡಿ ಆದೇಶ ಪತ್ರ

0 0
Read Time:2 Minute, 27 Second

ಹತ್ತಾರು ಹಗರಣಗಳಿಂದ ಹೈರಾಣಾಗಿರುವ ರಾಜ್ಯ ಕಾಂಗ್ರೆಸ್ ಸದ್ಯ ಹಗರಣದಿಂದ ತಪ್ಪಿಸಿಕೊಳ್ಳಲು ಹಿಂದೂ ಮುಖಂಡರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಇದೀಗ ಹಿಂದೂ ಮುಖಂಡರೊಬ್ಬರಿಗೆ ನೀಡಿರುವ ನೋಟಿಸ್ ಸರ್ಕಾರದ‌ ನರಿ ಬುದ್ಧಿಯನ್ನು ಬಟಾಬಯಲು ಮಾಡಿದೆ.

ಆದೇಶ ಪತ್ರದಲ್ಲೇನಿದೆ?

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಹಿಂದೂ ಪರ ಸಂಘಟನೆಗಳಲ್ಲಿ ಪ್ರಮುಖರು ಎನಿಸಿಕೊಂಡಿರುವ ಅಕ್ಷಯ್ ರಜಪೂತ್ ಕಲ್ಲಡ್ಕ ಅವರ ಮೇಲೆ ದ್ವೇಷದ ಕತ್ತಿ ಮಸೆಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಕುತಂತ್ರ ಬುದ್ಧಿಯನ್ನು ಹರಾಜುಗೊಳಿಸಿದೆ. ಸದ್ಯ, ಜಾರಿಯಾಗಿರುವ ನೋಟಿಸ್ ಪ್ರಕಾರ, ಹಿಂದೂ ಮುಖಂಡ ಅಕ್ಷಯ್ ರಜಪೂತ್ ಅವರು ‘ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ, ಸಮಾಜ ಘಾತುಕ ಕೆಲಸಗಳನ್ನು ಮಾಡುವ ಮೂಲಕ ಜನರ ನೆಮ್ಮದಿ ಹಾಳು ಮಾಡುವ ವ್ಯಕ್ತಿ’ ಎಂದು ಬಿಂಬಿಸಲಾಗುತ್ತಿದೆ. ಈ ಮೂಲಕ ಹಿಂದೂ ಸಮಾಜದ ಶಕ್ತಿಯನ್ನು ಬುಡಮೇಲು ಮಾಡುವ ಕೆಲಸವನ್ನು ಕಾಂಗ್ರೆಸ್ ತೆರೆಮರೆಯಲ್ಲಿ ನಿಂತು ಮಾಡುತ್ತಿದೆ.

ಸರ್ಕಾರದ ನಡೆಗೆ ತೀವ್ರ ವಿರೋಧ!

ರಾಜ್ಯದ ಯಾವುದೇ ಮೂಲೆಯಲ್ಲಿ ಹಿಂದೂ ವಿರೋಧಿ ಕೃತ್ಯಗಳು ನಡದರೂ ಕೂಡ ತಕ್ಷಣ ಧ್ವನಿ ಎತ್ತುವ ಕಟ್ಟಾ ಹಿಂದುತ್ವವಾದಿ ಅಕ್ಷಯ್ ರಜಪೂತ್ ಕಲ್ಲಡ್ಕ ಅವರ ವಿರುದ್ಧ ಸರ್ಕಾರ ಜಾರಿಗೊಳಿಸಿರುವ ನೋಟಿಸ್ ವಿರುದ್ಧ ಸದ್ಯ ಎಲ್ಲಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಂದೂ ಸಂಘಟನೆಯ ಪ್ರಮುಖರು, ‘ಅಕ್ಷಯ್ ರಜಪೂತ್ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುವ ಕೆಲಸ ಮಾಡುತ್ತಿದೆ. ನೋಟಿಸ್ ಹಿಂಪಡೆಯದೇ ಹೋದರೆ ಸರ್ಕಾರ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ’ ಎಂಬ ಎಚ್ಚರಿಕೆ ನೀಡಿದ್ದಾರೆ.

Happy
Happy
0 %
Sad
Sad
100 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *