ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸರ್ಕಾರದಿಂದ ಗುಡ್ ನ್ಯೂಸ್: ‘ನಮೋ ಡ್ರೋನ್ ದೀದಿ ಯೋಜನೆ’ ಪ್ರಾರಂಭ

0 0
Read Time:2 Minute, 47 Second

ನವದೆಹಲಿ: ಕೇಂದ್ರೀಯ ವಲಯದ ನಮೋ ಡ್ರೋನ್ ದೀದಿಯ ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಲಾಗಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ 1261 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸಲು ಈ ಕೇಂದ್ರ ವಲಯದ ಯೋಜನೆಗೆ ಅನುಮೋದನೆ ನೀಡಿದೆ.

ಈ ಯೋಜನೆಯು 2024-25 ರಿಂದ 2025-2026 ರ ಅವಧಿಯಲ್ಲಿ 14,500 ಆಯ್ದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಮಾರ್ಗಸೂಚಿಗಳ ಪ್ರಕಾರ, ನಮೋ ಡ್ರೋನ್ ದೀದಿ ಯೋಜನೆಯನ್ನು ಕೇಂದ್ರ ಮಟ್ಟದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ರಸಗೊಬ್ಬರ ಇಲಾಖೆ ಕಾರ್ಯದರ್ಶಿಗಳ ಅಧಿಕಾರ ಸಮಿತಿಯು ನಿರ್ವಹಿಸುತ್ತದೆ. ಡ್ರೋನ್‌ಗಳ ವೆಚ್ಚದ ಶೇಕಡಾ 80 ರಷ್ಟು ಮತ್ತು ಆಕ್ಸೆಸರೀಸ್ ಶುಲ್ಕವನ್ನು ಗರಿಷ್ಠ ಎಂಟು ಲಕ್ಷದವರೆಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಖರೀದಿಸಲು ನೀಡಲಾಗುತ್ತದೆ.

ಸ್ವಸಹಾಯ ಗುಂಪುಗಳ ಕ್ಲಸ್ಟರ್ ಮಟ್ಟದ ಒಕ್ಕೂಟಗಳು ರಾಷ್ಟ್ರೀಯ ಕೃಷಿ ಇನ್ಫ್ರಾ ಫೈನಾನ್ಸಿಂಗ್ ಫೆಸಿಲಿಟಿ ಅಡಿಯಲ್ಲಿ ಬಾಕಿ ಮೊತ್ತವನ್ನು ಸಾಲವಾಗಿ ಸಂಗ್ರಹಿಸುತ್ತವೆ. ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಲ್ಲಿ ಒಬ್ಬರನ್ನು ಕಡ್ಡಾಯವಾಗಿ ಡ್ರೋನ್ ಪೈಲಟ್ ತರಬೇತಿ ಮತ್ತು ಪೋಷಕಾಂಶಗಳು ಮತ್ತು ಕೀಟನಾಶಕಗಳ ಬಳಕೆಗಾಗಿ ಕೃಷಿ ಉದ್ದೇಶಕ್ಕಾಗಿ ಹೆಚ್ಚುವರಿ ತರಬೇತಿಯನ್ನು ಒಳಗೊಂಡಿರುವ 15 ದಿನಗಳ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.

ಲೀಡ್ ಫರ್ಟಿಲೈಸರ್ ಕಂಪನಿಗಳು ರಾಜ್ಯಗಳಿಗೆ ಜವಾಬ್ದಾರರಾಗಿರುತ್ತವೆ. ಅವರು ರಾಜ್ಯ ಇಲಾಖೆಗಳು, ಡ್ರೋನ್ ತಯಾರಕರು, ಸ್ವಸಹಾಯ ಗುಂಪುಗಳ ಕ್ಲಸ್ಟರ್ ಮಟ್ಟದ ಒಕ್ಕೂಟಗಳು ಮತ್ತು ರೈತರೊಂದಿಗೆ ಅಗತ್ಯ ಸಮನ್ವಯವನ್ನು ಸ್ಥಾಪಿಸುತ್ತಾರೆ. ಡ್ರೋನ್‌ಗಳನ್ನು ಲೀಡ್ ಫರ್ಟಿಲೈಸರ್ ಕಂಪನಿಗಳು ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆಯ ಮೂಲಕ ಖರೀದಿಸುತ್ತವೆ. ನಮೋ ಡ್ರೋನ್ ದೀದಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವಂತೆ ಸಚಿವಾಲಯವು ತಿಳಿಸಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *