IPL 2024| RCB ಅಭಿಮಾನಿಗಳ ಕನಸು ನುಚ್ಚುನೂರು: ರಾಜಸ್ಥಾನಕ್ಕೆ ಪ್ರಯಾಸದ ಗೆಲುವು

0 0
Read Time:4 Minute, 46 Second

ಐಪಿಎಲ್ 2024ರಲ್ಲಿ ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್‌ಗೆ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ರಾಜಸ್ಥಾನ್‌ ರಾಯಲ್ಸ್ ತಂಡಗಳು (RCB vs RR) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಾಡಿದವು. ಮಹತ್ವದ ಪಂದ್ಯದಲ್ಲಿ ರಾಜಸ್ಥಾನ್‌ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಈ ಮೂಲಕ ಮೊದಲು ಬ್ಯಾಟಿಂಗ್ ಗೆ ಬಂದ ಆರ್ ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ಪವರ್‌ಪ್ಲೇಯ ಅಂತ್ಯಕ್ಕೆ ಅವರು 1 ವಿಕೆಟ್‌ಗೆ 50 ರನ್ ಗಳಿಸಿದ್ದರು. ಆದರೆ ಪವರ್‌ಪ್ಲೇ ಮುಗಿದ ಕೆಲವೇ ಹೊತ್ತಿನಲ್ಲಿ ಬ್ಯಾಕ್‌ ಟು ಬ್ಯಾಕ್‌ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಆರ್‌ಸಿಬಿ ನಿಗದಿತ 20 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 172 ರನ್‌ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್‌ ತಂಡವು 19 ಓವರ್‌ಗೆ 6 ವಿಕೆಟ್ ನಷ್ಟಕ್ಕೆ  174 ರನ್‌ ಗಳಿಸುವ ಮೂಲಕ 4 ವಿಕೆಟ್‌‌ಗಳಿಂದ ಗೆದ್ದಿತು.  ಈ ಮೂಲಕ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದರೆ, ರಾಜಸ್ಥಾನ್‌ ಕ್ವಾಲಿಫೈಯರ್‌  2ನೇ ಪಂದ್ಯದಲ್ಲಿ ಹೈದರಾಬಾದ್‌‌ ವಿರುದ್ಧ ಸೆಣಸಾಡಲಿದೆ.

ರಾಜಸ್ಥಾನ್‌ ಬ್ಯಾಟಿಂಗ್‌:

ಇನ್ನು, ಆರ್‌‌ಸಿಬಿ ನೀಡಿದ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್‌ ತಂಡವು ರೋಚಕವಾಗಿ ಗೆಲುವು ದಾಖಲಿಸಿತು. ಯಶಸ್ವಿ ಜೈಸ್ವಾಲ್‌ 45 ರನ್, ಕ್ಯಾಡ್‌ಮೋರ್‌ 20 ರನ್, ಸಂಜು ಸ್ಯಾಮ್ಸನ್‌ 17 ರನ್, ರಿಯಾನ್‌ ಪರಾಗ್‌ 36 ರನ್, ದ್ರುವ್‌ ಜುರೇಲ್‌ 8 ರನ್, ಹಿಟ್‌ಮಾಯರ್ 26 ರನ್, ರೋಮನ್‌ ಪೋವೆಲ್ 16 ರನ್ ಗಳಿಸಿದರು.

ಅಬ್ಬರಿಸಿದ ಆರ್‌‌ಸಿಬಿ ಬ್ಯಾಟಿಂಗ್‌:

ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಯುಜುವೇಂದ್ರ ಚಹಾಲ್ ದೊಡ್ಡ ಹೊಡೆತ ನೀಡಿದರು. ಮಿಡ್‌ವಿಕೆಟ್ ಬೌಂಡರಿಯಲ್ಲಿ ಬದಲಿ ಆಟಗಾರ ಡೊನೊವನ್ ಫೆರೇರಾಗೆ ಚಾಹಲ್ ಕೊಹ್ಲಿಗೆ ಕ್ಯಾಚ್ ನೀಡಿದರು. ವಿರಾಟ್ ಕೊಹ್ಲಿ ಔಟಾದ ಕೂಡಲೇ ಆರ್‌ಸಿಬಿ ಒತ್ತಡಕ್ಕೆ ಸಿಲುಕಿತು. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿದರೂ ನಿರೀಕ್ಷೆಗೂ ತಕ್ಕಂತೆ ಮಾಡಲು ಸಾಧ್ಯವಾಗಲಿಲ್ಲ. ಈ ಮೂಲಕ ತಂಡ 20 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 172 ರನ್‌ ಗಳಿಸಿತು. ಬೆಂಗಳೂರಿನ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಫಾಫ್ ಡು ಪ್ಲೆಸಿಸ್ 4.4 ಓವರ್‌ಗಳಲ್ಲಿ 14 ಎಸೆತಗಳಲ್ಲಿ 17 ರನ್ ಗಳಿಸಿ ಪೆವೆಲಿಯನ್‌ಗೆಡ ಮರಳಿದರು.

ಬೆಂಗಳೂರಿನ ಇನ್ನಿಂಗ್ಸ್‌ ಅನ್ನು ಮುನ್ನಡೆಸುವ ಜವಾಬ್ದಾರಿ ಕೊಹ್ಲಿಯ ಮೇಲಿತ್ತು. ಆದರೆ ಕೊಹ್ಲಿ 24 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದಾಗ ಆರ್ಸಿಬಿ ಸಂಕಷ್ಟಕ್ಕೆ ಸಿಲುಕಿತು. ಪಾಟಿದಾರ್, ಲ್ಯಾಮ್ರೋರ್, ಗ್ರೀನ್ ಎಲ್ಲರೂ ಪ್ರಯತ್ನಿಸಿದರು ಆದರೆ ಯಾರೂ ವಿಕೆಟ್‌ನಲ್ಲಿ ನೆಲೆಗೊಳ್ಳಲು ಸಾಧ್ಯವಾಗಲಿಲ್ಲ. ಇದರಲ್ಲಿ ಲ್ಯಾಮ್ರೋರ್ ಅವರ 17 ಎಸೆತಗಳಲ್ಲಿ 32 ಮತ್ತು ರಜತ್ ಪಾಟಿದಾರ್ ಅವರ 22 ಎಸೆತಗಳಲ್ಲಿ 34 ರನ್‌ಗಳ ಆಧಾರದ ಮೇಲೆ RCB 172 ರನ್ ಗಳಿಸಿತು. ಎಲಿಮಿನೇಟರ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮುಡಿಸಿದರು. ಅವರು ಗೋಲ್ಡನ್ ಡಕ್‌ನೊಂದಿಗೆ ಔಟಾದರು. ಅವಕಾಶಗಳಿದ್ದರೂ, ದಿನೇಶ್ ಕಾರ್ತಿಕ್ ಕೂಡ ವಿಫಲರಾದರು, ಅವರು 13 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿದರು. ಇದರಿಂದಾಗಿ ಮಹತ್ವದ ಪಂದ್ಯದಲ್ಲಿ ಆರ್‌‌ಸಿಬಿ ಕಳೆದ ಪಂದ್ಯದ ಜೋಶ್‌ ಕಂಡುಬಂದಿಲ್ಲ.

ರಾಜಸ್ಥಾನ್‌ ಸಂಘಟಿತ ಬೌಲಿಂಗ್‌ ದಾಳಿ:

ಇನ್ನು, ರಾಜಸ್ಥಾನ್‌ ರಾಯಲ್ಸ್‌ ತಂಡದ ಬೌಲರ್‌ಗಳು ಭರ್ಜರಿ ಪ್ರದರ್ಶನ ನೀಡಿದರು. ರಾಜಸ್ಥಾನ್ ಪರ ಟ್ರೆಂಟ್‌ ಬೋಲ್ಟ್‌ 4 ಓವರ್‌ಗೆ 16 ನೀಡಿ 1 ವಿಕೆಟ್, ಸಂದೀಪ್‌ ಶರ್ಮಾ 4 ಓವರ್‌ಗೆ 48 ರನ್‌ ನಿಡಿ 1 ವಿಕೆಟ್, ಆವೇಶ್ ಖಾನ್‌ 4 ಓವರ್‌ಗೆ 44 ರನ್‌ಗೆ 3 ವಿಕೆಟ್ ಪಡೆದರೆ ರವಿಚಂದ್ರನ್‌ ಅಶ್ವಿನ್‌ 4 ಓವರ್‌ಗೆ 19 ರನ್‌ ನಿಡಿ 2 ವಿಕೆಟ್ ಹಾಗೂ ಚಹಾಲ್‌ 1 ವಿಕೆಟ್ ಪಡೆದರು. ಈ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡ ಆರ್‌‌ಸಿಬಿ ವಿರುದ್ಧ ಉತ್ತಮ ಬೌಲಿಂಗ್‌ ದಾಳಿ ನಡೆಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *